ಸಂವಿಧಾನ ಶಿಲ್ಪಿಯ ಜನ್ಮ ದಿನ

Update: 2018-04-14 05:41 GMT

ಇಡೀ‌ ವಿಶ್ವಕ್ಕೆ ವಿಶ್ವವೇ‌  ಬೆರಗಾಗುವಂತಹ ಅಧ್ಬುತವಾದ ಪವಿತ್ರ ಸಂವಿಧಾನವನ್ನು ರಚಿಸಿದ, ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದ, ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ  ಕೊನೆಯತನಕ ನಿಸ್ಪೃಹತೆ- ನಿಸ್ವಾರ್ಥದಿಂದ ಹೋರಾಡಿದ  ಧೀಮಂತ ನಾಯಕ ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ  127 ನೇ ಜಯಂತಿಯ ಶುಭಾಶಯಗಳು.

ಭಾರತದೇಶವನ್ನು ಕಾಡುತ್ತಿದ್ದ ಅಸ್ಪೃಶ್ಯತೆ ಎಂಬ ಅನಿಷ್ಟವನ್ನು ಮೂಲೋತ್ಪಾಟನೆ ಮಾಡಿದ ಮಹಾಪುರುಷ ಅಂಬೇಡ್ಕರ್. ಸ್ವತಂತ್ರ ಭಾರತದ ಸಂವಿಧಾನ ರಚಿಸಿದ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್.

ಅನ್ಯಾಯ, ಶೋಷಣೆ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿ ಜಯಗಳಿಸಿದ ವ್ಯಕ್ತಿ. ಅಶಕ್ತ ದಲಿತ ಸಮೂಹದ ನೋವಿನ ಮಾರ್ದನಿ ಎಂದೇ ಪ್ರಸಿದ್ಧರಾಗಿದ್ದರು. ಮೇಲಾಗಿ ಮಾನವತಾವಾದಿ ಸಂವಿಧಾನ ಶಿಲ್ಪಿ ಎಂದು ಪರಿಗಣಿತರಾದವರು. ಅವರು ಕೇವಲ ಭಾರತ ದೇಶದ ನಾಯಕರಲ್ಲ ಅವರು ವಿಶ್ವದ ನಾಯಕರಾಗಿದ್ದು, ಮಾತ್ರವಲ್ಲದೇ ಅವರ ಹುಟ್ಟಿದ ದಿನವನ್ನು 143 ರಾಷ್ಟ್ರಗಳಲ್ಲಿ ಆಚರಣೆ ಮಾಡುವ ಮೂಲಕ ವಿಶೇಷ ಗೌರವ ನೀಡಲಾಗುತ್ತಿರುವ ಮಹಾನ್ ವ್ಯಕ್ತಿ !

ಅಂಬೇಡ್ಕರ್‌ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ಮತ್ತು ದಲಿತರ ಮೇಲೆ ಹಲ್ಲೆ ನಡೆಸಿದ ಹಲವು ಪ್ರಕರಣಗಳು ದೇಶದ ವಿವಿಧೆಡೆ ಇತ್ತೀಚೆಗೆ ನಡೆಯುತ್ತಿವೆ.ಇಡೀ ಪ್ರಜಾಪ್ರಭುತ್ವ ರಾಷ್ಟ್ರ ಅಪಾಯದ ಅಂಚಿನಲ್ಲಿದೆ. " ಪೂಜ್ಯ ಸಂವಿಧಾನ ನಮ್ಮ ಪ್ರಜಾಪ್ರಭುತ್ವದ ಅಡಿಗಲ್ಲು"  ಅದನ್ನು ಅಲುಗಾಡಿಸಲು ಪ್ರಯತ್ನಿಸುವ ದುಷ್ಟ ಶಕ್ತಿಗಳ ವಿರುದ್ಧ ಜಾಗೃತರಾಗಿ, ಸಂವಿಧಾನ ವಿರೋಧಿಗಳ ವಿರುದ್ಧ ಹೋರಾಡುವುದೇ ಡಾ. ಅಂಬೇಡ್ಕರ್ ಅವರ ಜಯಂತಿಯಂದು ಪ್ರತಿಯೊಬ್ಬ ನಾಗರಿಕನೂ ಅವರಿಗೆ ಸಲ್ಲಿಸುವ ನಿಜವಾದ ಜನ್ಮದಿನದ ಶುಭಾಶಯ.

Writer - ಮನ್ಸೂರ್ ಅಹ್ಮದ್ ಸಾಮಣಿಗೆ

contributor

Editor - ಮನ್ಸೂರ್ ಅಹ್ಮದ್ ಸಾಮಣಿಗೆ

contributor

Similar News