ಜೆಎನ್‌ಯು ಲೈಂಗಿಕ ಕಿರುಕುಳ: ದೂರು ದಾಖಲು

Update: 2018-04-14 17:16 GMT

ಹೊಸದಿಲ್ಲಿ, ಎ. 13: ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಅಧ್ಯಾಪಕರೋರ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜೆಎನ್‌ಯುವಿನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಮೂರನೇ ಲೈಂಗಿಕ ಕಿರುಕುಳದ ಪ್ರಕರಣ ಇದಾಗಿದೆ. ಪ್ರಕರಣ ದಾಖಲಿಸಿರುವುದನ್ನು ಉಪ ಪೊಲೀಸ್ ಆಯುಕ್ತ ಮಿಲಿಂದ್ ದುಂಬೆರೆ ದೃಢಪಡಿಸಿದ್ದಾರೆ. ‘‘ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಸಯನ್ಸ್‌ನ ಅಧ್ಯಾಪಕರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಜೆಎನ್‌ಯುನ ಪಿಎಚ್‌ಡಿ ವಿದ್ಯಾರ್ಥಿನಿ ದೂರು ದಾಖಲಿಸಿದ್ದಾರೆ.’’ ಎಂದು ಅವರು ತಿಳಿಸಿದ್ದಾರೆ. ಶುಕ್ರವಾರ ದೂರು ಸ್ವೀಕರಿಸಲಾಗಿದೆ ಹಾಗೂ ಅದೇ ದಿನ ಪ್ರಕರಣ ದಾಖಲಿಸಲಾಗಿದೆ ಎಂದು ದುಂಬೆರೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News