ಅಪಘಾತವುಂಟಾದಾಗ ಏರ್‌ಬ್ಯಾಗ್ ಹೇಗೆ ಪ್ರಾಣ ರಕ್ಷಿಸುತ್ತದೆ?: ವೀಡಿಯೊ ನೋಡಿ

Update: 2018-04-15 13:48 GMT

ವಾಹನಗಳ ಸಂಖ್ಯೆ ಹೆಚ್ಚಾದಷ್ಟೂ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಪಘಾತಗಳು ಎಷ್ಟೊಂದು ಮಾರಕವಾಗಬಲ್ಲವು ಎನ್ನುವುದನ್ನು ಗ್ಲೋಬಲ್ ಎನ್‌ಸಿಎಪಿ ಗ್ರೂಪ್ ಇತ್ತೀಚಿಗೆ ಟ್ವಿಟರ್‌ನಲ್ಲಿ ಬಿಡುಗಡೆಗೊಳಿಸಿರುವ ಸರಣಿ ವೀಡಿಯೊಗಳು ವಿವರಿಸಿವೆ. ಅಪಘಾತ ಸಾಧ್ಯತೆಗಳನ್ನು ಕಡಿಮೆ ಮಾಡಲು ಆಧುನಿಕ ಕಾರುಗಳಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗುತ್ತಿದೆಯಾದರೂ, ಅಪಘಾತವುಂಟಾದಾಗ ಜೀವಹಾನಿ ಯನ್ನು ತಪ್ಪಿಸುವಲ್ಲಿ ಸೀಟ್‌ಬೆಲ್ಟ್‌ಗಳು ಮತ್ತು ಏರ್‌ಬ್ಯಾಗ್‌ಗಳ ಹಳೆಯ ಜೋಡಿಯನ್ನು ಮೀರಿಸುವಂಥದ್ದು ಯಾವುದೂ ಇಲ್ಲ.

ಏರ್‌ಬ್ಯಾಗ್‌ಗಳನ್ನು ಅಳವಡಿಸದೆ ಕಾರುಗಳನ್ನು ತಯಾರಿಸಲು ಭಾರತೀಯ ಕಾನೂನು ಈಗಲೂ ಅವಕಾಶ ನೀಡುತ್ತಿದೆ. ಆದರೆ ಇದು ಅಪಘಾತಗಳ ತೀವ್ರತೆ ಹೆಚ್ಚಲು ಒಂದು ಕಾರಣವಾಗಿದೆ. ಯಾವುದೇ ಅಪಘಾತವುಂಟಾದಾಗ ನಮ್ಮ ಜೀವಕ್ಕೆ ಹೆಚ್ಚಿನ ಹಾನಿಗೆ ಅವಕಾಶ ನೀಡದ ಕಾರಿನ ಖರೀದಿಯು ವಿವೇಕದ ಕ್ರಮವಾಗಿದೆ. ಕಾರುಗಳಲ್ಲಿ ಎಷ್ಟೇ ಸುರಕ್ಷತಾ ಕ್ರಮಗಳನ್ನು ಅಳವಡಿಸಿರಲಿ, ಸೀಟ್‌ಬೆಲ್ಟ್ ಮತ್ತು ಏರ್‌ಬ್ಯಾಗ್‌ಗಳಿಲ್ಲದೆ ಇವು ಪರಿಪೂರ್ಣವಾಗುವುದಿಲ್ಲ. ಇವು ಅಪಘಾತ ಸಂದರ್ಭದಲ್ಲಿ ಜೀವಹಾನಿಯ ಸಾಧ್ಯತೆಯನ್ನು ಶೇ.50ರಷ್ಟು ತಗ್ಗಿಸುತ್ತವೆ ಎಂದು ನ್ಯೂಝಿಲ್ಯಾಂಡ್‌ನಲ್ಲಿ ನಡೆಸಲಾದ ಅಧ್ಯಯನವೊಂದು ಬೆಟ್ಟು ಮಾಡಿದೆ.

 ವಿಷಾದವೆಂದರೆ ಏರ್‌ಬ್ಯಾಗ್ ತಂತ್ರಜ್ಞಾನವು ಆವಿಷ್ಕಾರಗೊಂಡು ವರ್ಷಗಳೇ ಕಳೆದಿದ್ದರೂ ರಸ್ತೆಯಲ್ಲಿಂದು ಸಂಚರಿಸುತ್ತಿರುವ ಕಾರುಗಳ ಪೈಕಿ ಹೆಚ್ಚಿನವು ಈ ವ್ಯವಸ್ಥೆಯನ್ನು ಹೊಂದಿಲ್ಲ. ಇಲ್ಲಿರುವ ವೀಡಿಯೋ ಏರ್‌ಬ್ಯಾಗಗಳಿಲ್ಲದ ಕಾರು ಮತ್ತು ಏರ್‌ಬ್ಯಾಗ್‌ಗಳಿರುವ ಕಾರು ಅಪಘಾತಕ್ಕೊಳಗಾದಾಗ ಏನಾಗುತ್ತದೆ ಎನ್ನುವುದನ್ನು ತೋರಿಸುತ್ತದೆ. ಏರ್‌ಬ್ಯಾಗ್ ಪ್ರಾಣರಕ್ಷಕವಾಗಿದ್ದರೂ ಹೆಚ್ಚಿನ ಬಾರಿ ಜನರು ಕಾರು ಖರೀದಿ ವೇಳೆ ಕೆಲವು ರೂಪಾಯಿಗಳನ್ನುಳಿಸಲು ಏರ್‌ಬ್ಯಾಗ್ ಇಲ್ಲದ ಕಾರುಗಳನ್ನು ಬಯಸುತ್ತಾರೆ. ಮುಖಾಮುಖ ಢಿಕ್ಕಿಗಳುಂಟಾದಾಗ ವ್ಯಕ್ತಿಯ ಪ್ರಾಣರಕ್ಷಣೆಯಲ್ಲಿ ಏರ್‌ಬ್ಯಾಗ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News