ಯುಎಇ ವಿಮಾನ ನಿಲ್ದಾಣಗಳಲ್ಲಿ ವಿದೇಶೀಯರಿಗೆ ಪ್ರವೇಶ ವೀಸಾ

Update: 2018-04-15 17:35 GMT

ಅಬುಧಾಬಿ, ಎ. 15: ಯುಎಇಯ ವಿಮಾನ ನಿಲ್ದಾಣಗಳ ಮೂಲಕ ಹಾದು ಹೋಗುವ ಪ್ರಯಾಣಿಕರಿಗೆ ದೇಶದ ಪ್ರಮುಖ ಪ್ರವಾಸಿ ಆಕರ್ಷಣೆಯ ತಾಣಗಳನ್ನು ವೀಕ್ಷಿಸುವುದಕ್ಕಾಗಿ ಪ್ರವೇಶ ವೀಸಾಗಳನ್ನು ನೀಡಲು ಯುಎಇ ಸಚಿವ ಸಂಪುಟ ಹಸಿರು ನಿಶಾನೆ ತೋರಿಸಿದೆ.

ಯುಎಇಯ ವಿಮಾನ ನಿಲ್ದಾಣಗಳ ಮೂಲಕ ಹಾದು ಹೋಗುವ ಪ್ರಯಾಣಿಕರು ಒಂದು ದಿನದ ಮಟ್ಟಿಗೆ ಯುಎಇಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಇದು ಸಹಾಯಕವಾಗಲಿದೆ.

ಈ ಸಂಬಂಧ ನೂತನ ನೀತಿಯನ್ನು ರೂಪಿಸಲು ಗುರುತು ಮತ್ತು ಪೌರತ್ವ ಪ್ರಾಧಿಕಾರದ ನೇತೃತ್ವದಲ್ಲಿ ಕ್ರಿಯಾ ಗುಂಪೊಂದನ್ನು ಸಚಿವ ಸಂಪುಟ ರಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News