ಡಿಲಿಟ್ ಆದ ಫೋಟೊ, ವಿಡಿಯೋ ಮತ್ತೊಮ್ಮೆ ಪಡೆಯಲು ವಾಟ್ಸ್ಯಾಪ್ ನಿಂದ ಹೊಸ ಫೀಚರ್

Update: 2018-04-16 16:05 GMT

ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ವಾಟ್ಸ್ಯಾಪ್ ನಮ್ಮ ಬದುಕಿನ ಅವಿಭಾಜ್ಯ ಅಂಗದಂತಾಗಿಬಿಟ್ಟಿದೆ. ಸಂದೇಶಗಳನ್ನು, ಫೋಟೊಗಳನ್ನು, ವಿಡಿಯೋಗಳನ್ನು ಕಳುಹಿಸಲು, ಆಡಿಯೋ, ವಿಡಿಯೋ ಕಾಲ್ ಗಾಗಿಯೂ ವಾಟ್ಸ್ಯಾಪ್ ಇಂದು ನಮಗೆ ಅಗತ್ಯವಾಗಿಬಿಟ್ಟಿದೆ. ಕೆಲವೊಮ್ಮೆ ವಾಟ್ಸ್ಯಾಪ್ ನಲ್ಲಿ ಬರುವ ಹಲವು ಫೋಟೊಗಳನ್ನು, ವಿಡಿಯೋಗಳನ್ನು ನಾವು ಡೌನ್ ಲೋಡ್ ಮಾಡಿಟ್ಟಿರುತ್ತೇವೆ. ಆದರೆ ಅನಗತ್ಯ ಫೈಲ್ ಗಳನ್ನು ಡಿಲಿಟ್ ಮಾಡುವ ಸಂದರ್ಭ ಕೆಲವೊಂದು ಅಗತ್ಯ ಫೋಟೊಗಳು, ವಿಡಿಯೋಗಳು ಕೂಡ ಕಣ್ತಪ್ಪಿನಿಂದ ಡಿಲಿಟ್ ಆಗಬಹುದು. ಈ ಸಮಸ್ಯೆಗೆ ವಾಟ್ಸ್ಯಾಪ್ ಪರಿಹಾರ ಕಂಡುಕೊಂಡಿದೆ.

ಅನಿರೀಕ್ಷಿತವಾಗಿ ಡಿಲಿಟ್ ಆದ ಫೋಟೊಗಳನ್ನು ಆಂಡ್ರಾಯ್ಡ್ ನಲ್ಲಿ ಬೆಟಾ ವರ್ಶನ್ ಬಳಸುತ್ತಿರುವ ಬಳಕೆದಾರರು ವಾಪಸ್ ಪಡೆದುಕೊಳ್ಳಬಹುದು ಎಂದು WaBetaInfo ವರದಿ ಮಾಡಿದೆ.

ನಿಮ್ಮ ಗೆಳೆಯ/ತಿ ನಿಮಗೆ ಯಾವುದಾದರೂ ಫೋಟೊ ಕಳುಹಿರುತ್ತಾನೆ/ಳೆ. ಆಕಸ್ಮಿಕವಾಗಿ ಗ್ಯಾಲರಿಯ ವಾಟ್ಸ್ಯಾಪ್ ಫೋಲ್ಡರ್ ನಿಂದ ಅದು ಡಿಲಿಟ್ ಆಗುತ್ತದೆ. ಈ ಸಂದರ್ಭ ಅದು ಡೌನ್ ಲೋಡ್ ಮಾಡಲಾಗದ ಫೈಲ್ ಆಗುತ್ತದೆ. ನೂತನ ಅಪ್ ಡೇಟ್ ಮೂಲಕ ಡಿಲಿಟ್ ಆದ ಫೋಟೊವನ್ನು ಸರ್ವರ್ ನಿಂದ ರಿಸ್ಟೋರ್ ಮಾಡಲು ವಾಟ್ಸ್ಯಾಪ್ ಅವಕಾಶ ಕಲ್ಪಿಸುತ್ತದೆ. ಚಾಟ್ ವಿಂಡೋನಲ್ಲಿರುವ ಫೋಟೊವನ್ನು ಬಳಕೆದಾರರು ಮತ್ತೊಮ್ಮೆ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ರೀತಿ ಡೌನ್ ಲೋಡ್ ಮಾಡಿಕೊಳ್ಳಲು ನಾವು ವಾಟ್ಸ್ಯಾಪ್ ನಿಂದ ಆ ಸಂದೇಶವನ್ನು ಅಳಿಸಿರಬಾರದು. ಆಂಡ್ರಾಯ್ಡ್ ನ ಬೆಟಾ ಬಳಕೆದಾರರಿಗೆ ಮಾತ್ರ ಈ ಫೀಚರ್ ಬಳಕೆ ಸಾಧ್ಯವಾಗಲಿದೆ.

“ಎಸ್ ಡಿ ಕಾರ್ಡ್ ನಿಂದ ನಿಮ್ಮ ಫೋಟೊಗಳು ಡಿಲಿಟ್ ಆಗಿ ಚಾಟ್ ನಲ್ಲಿ ಸಂದೇಶಗಳು ಹಾಗೇ ಇದ್ದಲ್ಲಿ ಮಾತ್ರ ಮತ್ತೊಮ್ಮೆ ಫೋಟೊ ಡೌನ್ ಲೋಡ್ ಮಾಡಿಕೊಳ್ಳಬಹುದು” ಎಂದು ವರದಿ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News