ನನ್ನ ತೋಳುಗಳೇ ಕೆಲಸ ಮಾಡುತ್ತವೆ,ಬೆನ್ನು ಬಳಸಬೇಕಾದ ಅಗತ್ಯ ನನಗಿಲ್ಲ:ಧೋನಿ

Update: 2018-04-16 18:31 GMT

ಮೊಹಾಲಿ,ಎ.16: ಮಹೇಂದ್ರಸಿಂಗ್ ಧೋನಿ ಅವರ ಶಕ್ತಿಯುತ ಮುಂದೋಳುಗಳು ಭಾರತಕ್ಕೆ ಹಲವಾರು ಪಂದ್ಯಗಳನ್ನು ಗೆದ್ದುಕೊಟ್ಟಿವೆ ಮತ್ತು ತೀವ್ರ ಬೆನ್ನುನೋವು ಕಾಡುತ್ತಿದ್ದರೂ ಚೆಂಡನ್ನು ಬೌಂಡರಿಗಟ್ಟುವ ಅವರ ಆತ್ಮವಿಶ್ವಾಸದ ಬಗ್ಗೆ ಅಚ್ಚರಿ ಪಡಬೇಕಿಲ್ಲ.

ಚೆಂಡನ್ನು ಎತ್ತರಕ್ಕೆ ಹೊಡೆಯುವ ಸಂದರ್ಭದಲ್ಲಿ ಶರೀರದ ತೂಕವನ್ನು ಹೊಡೆತಕ್ಕೆ ವರ್ಗಾಯಿಸುವಲ್ಲಿ ಬ್ಯಾಟ್ಸ್ ಮನ್ ತನ್ನ ಭಂಗಿಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಆದರೆ ರವಿವಾರ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ವೇಳೆ ನಾಯಕ ಧೋನಿ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದರೂ ಅವರ ಹೊಡೆತಗಳು ಲೀಲಾಜಾಲವಾಗಿ ಬೌಂಡರಿ ಗೆರೆಯನ್ನು ದಾಟುತ್ತಲೇ ಇದ್ದವು. ಬೆನ್ನು ನೋಯುತ್ತಿದ್ದರೂ ಅಂತಹ ಹೊಡೆತಗಳನ್ನು ಬೀಸಲು ಸಾಧ್ಯವಾಗಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಧೋನಿ,‘ಬೆನ್ನು ನೋಯುತ್ತಿತ್ತು, ನಿಜ. ಆದರೆ ದೇವರು ನನಗೆ ಸಾಕಷ್ಟು ಶಕ್ತಿಯನ್ನು ನೀಡಿದ್ದಾನೆ ಮತ್ತು ನಾನು ನನ್ನ ಬೆನ್ನನ್ನು ಹೆಚ್ಚಾಗಿ ಬಳಸುವ ಅಗತ್ಯವಿಲ್ಲ. ನನ್ನ ತೋಳುಗಳೇ ಕೆಲಸ ಮಾಡುತ್ತವೆ’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News