ಚುನಾವಣಾ ದುಂದುವೆಚ್ಚ: ಕಠಿಣ ಕ್ರಮ ಅಗತ್ಯ

Update: 2018-04-16 18:42 GMT

ಮಾನ್ಯರೇ,

ಚುನಾವಣಾ ಆಯೋಗವು ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಖರ್ಚು ಮಾಡಲು ರೂ. 28 ಲಕ್ಷ ಮಿತಿಗೊಳಿಸಿದೆ. ಆದರೆ ಈ ಅಭ್ಯರ್ಥಿಗಳಲ್ಲಿ ಕೆಲವರು 28 ಕೋಟಿ ಖರ್ಚು ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ.

ಈಗಾಗಲೇ ಕೋಟಿಗಟ್ಟಲೆ ಬೆಲೆಯ ನಗದು, ಚಿನ್ನ ಮತ್ತು ಉಡುಗೊರೆ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ದಿನನಿತ್ಯ ಇಂತಹ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಲೇ ಇವೆ ಹೊರತು ನಿಂತಿಲ್ಲ. ಇನ್ನು ಚುನಾವಣೆ ಹತ್ತಿರ ಬರುವಾಗ ಇಂತಹ ಸುದ್ದಿಗಳು ಭರಪೂರ.

ಈ ರೀತಿ ಹಣವನ್ನು ದುಂದು ವೆಚ್ಚ ಮಾಡುವ ಅಭ್ಯರ್ಥಿಗಳು ಭ್ರಷ್ಟ್ಟಾಚಾರ ಹಾಗೂ ಅನ್ಯ ಮಾರ್ಗಗಳಿಂದ ಹಣಗಳಿಸಿದ್ದಾಗಿದೆ. ಇಂತಹವರು ಆಯ್ಕೆಯಾದ ನಂತರ ಈಗ ಹಂಚುವ ಹಣದ ಹಲವು ಪಟ್ಟು ಗಳಿಸುವುದು ಶತಃಸಿದ್ಧ.

ನ್ಯಾಯಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಅಭ್ಯರ್ಥಿಗಳ, ಹಿಂಬಾಲಕರ, ಕಾರ್ಯಕರ್ತರ ಮೇಲೆ ಹದ್ದಿನ ಕಣ್ಣಿಡುವುದು ಅತ್ಯಗತ್ಯ. ಭಯ, ಆಮಿಷ ಹಣದ ಪ್ರಚೋದನೆಗಳಿಂದ ಮತದಾರರನ್ನು ಒಲೈಸುವುದನ್ನು ತಪ್ಪಿಸಲು ಹಾಗೂ ಹಣ ಜನ ದೇಹ ಬಲದಿಂದ ಮತದಾರರನ್ನು ವಂಚಿಸಲು ಸಾಧ್ಯವಾಗುವುದನ್ನು ತಡೆಗಟ್ಟಲು ಸಾಧ್ಯವಾದರೆ ಮಾತ್ರ ಪ್ರಾಮಾಣಿಕ ಅಭ್ಯರ್ಥಿಗಳು ಆಯ್ಕೆಯಾಗಿ ಭ್ರಷ್ಟಚಾರವನ್ನು ತಡೆಗಟ್ಟಲು ಸಾಧ್ಯವಾಗಬಹುದು. 

Writer - -ಚಂದ್ರಶೇಖರ ಬೆಂಗಳೂರು

contributor

Editor - -ಚಂದ್ರಶೇಖರ ಬೆಂಗಳೂರು

contributor

Similar News