​ಕಥುವಾ ಅತ್ಯಾಚಾರ-ಹತ್ಯೆ ಪ್ರಕರಣಕ್ಕೆ ಖಂಡನೆ: ಜುಬೈಲ್‌ನಲ್ಲಿ ಕಾಂಗ್ರೆಸ್‌ನಿಂದ ಖಂಡನಾ ಸಭೆ

Update: 2018-04-17 12:50 GMT

ಸೌದಿ ಅರಬಿಯ, ಎ.17: ಜಮ್ಮುವಿನ ಕಥುವಾದಲ್ಲಿ ಇತ್ತೀಚೆಗೆ ನಡೆದ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಖಂಡಿಸಿ, ಸಂತ್ರಸ್ತಳ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೌದಿ ಅರಬಿಯಾ ಎನ್‌ಆರ್‌ಐ ಘಟಕದ ಪೂರ್ವ ಪ್ರಾಂತ್ಯದ ವತಿಯಿಂದ ಖಂಡನಾ ಸಭೆ ನಡೆಯಿತು.

ಜುಬೈಲ್‌ನ ಗಲ್ಫ್ ಏಶ್ಯ ಆಸ್ಪತ್ರೆಯ ಸಭಾಂಗಣದಲ್ಲಿ ಜರುಗಿದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಗೌರವಾಧ್ಯಕ್ಷ ಫಾರೂಕ್ ಅಹ್ಮದ್ ಕರ್ನಿರೆ, ಎಂಟು ವರ್ಷದ ಬಾಲಕಿಯ ಮೇಲಿನ ದುಷ್ಕೃತ್ಯ ಖಂಡನೀಯ. ಈ ದುಷ್ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಮುಹಮ್ಮದಲಿ ಮುಝೈನ್, ಮಲೆನಾಡು ಸಮಿತಿಯ ಶಮೀಮ್ ಮಾತನಾಡಿದು.

ಕಾಂಗ್ರೆಸ್‌ನ ವಕ್ತಾರ ಫಾರೂಕ್, ಪ್ರಧಾನ ಕಾರ್ಯದರ್ಶಿ ಕೆ.ಎಚ್.ರಫೀಕ್ ಸೂರಿಂಜೆ ಮತ್ತು ಸಮೀರ್ ಲಕ್ಕಿಸ್ಟಾರ್ ಸಾಂದರ್ಭಿಕವಾಗಿ ಮಾತಾಡಿದರು.

ಉದ್ಯಮಿಗಳಾದ ಉರೈಶ್, ಮುಬೀನ್ ಕೃಷ್ಣಾಪುರ, ಹಿರಿಯ ಕಾಂಗ್ರೆಸಿಗ ಅನ್ವರ್ ಹುಸೈನ್ ಗೂಡಿನಬಳಿ, ರಹ್ಮಾನ್ ಮುಝೈನ್ ವೇದಿಕೆಯಲ್ಲಿದ್ದರು.

ಉದ್ಯಮಿಗಳಾದ ಹಮೀದ್ ಕಾಪು, ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಕಬೀರ್ ಕೃಷ್ಣಾಪುರ, ಶಕೀಲ್ ಕೃಷ್ಣಾಪುರ, ಅನ್ಸಾಬ್ ಸುರತ್ಕಲ್ ಜಾವೇದ್ ಬಿಜೈ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News