ಮರಳು ಬಿರುಗಾಳಿ: ರಿಯಾದ್‌ನಲ್ಲಿ ಶಾಲೆಗಳಿಗೆ ರಜೆ

Update: 2018-04-17 16:53 GMT

ಜಿದ್ದಾ (ಸೌದಿ ಅರೇಬಿಯ), ಎ. 17: ಕೆಟ್ಟ ಹವಾಮಾನದ ಹಿನ್ನೆಲೆಯಲ್ಲಿ ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನಲ್ಲಿ ಮಂಗಳವಾರ ಶಾಲೆಗಳಿಗೆ ರಜೆ ಸಾರಲಾಯಿತು ಎಂದು ರಿಯಾದ್ ಪ್ರಾಂತದ ಶಿಕ್ಷಣ ಸಚಿವಾಲಯ ತಿಳಿಸಿದೆ.

ಮರಳು ಬಿರುಗಾಳಿ ಬಗ್ಗೆ ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಯ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಲಾಯಿತು ಎಂದು ಸಚಿವಾಲಯದ ಮಹಾ ನಿರ್ದೇಶಕ ಹಾಮದ್ ಬಿನ್ ನಾಸಿರ್ ಅಲ್-ವಹೈಬ್ ತಿಳಿಸಿರುವುದಾಗಿ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News