ಐಪಿಎಲ್: ಕೋಲ್ಕತಾ ಗೆಲುವಿಗೆ 161 ರನ್ ಗುರಿ

Update: 2018-04-18 16:14 GMT

ಜೈಪುರ, ಎ.18: ನಾಯಕ ಅಜಿಂಕ್ಯ ರಹಾನೆ ಹಾಗೂ ಶಾರ್ಟ್ ಮೊದಲ ವಿಕೆಟ್‌ಗೆ ದಾಖಲಿಸಿದ ಅರ್ಧಶತಕದ ಜೊತೆಯಾಟದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡದ ಗೆಲುವಿಗೆ 161 ರನ್ ಗುರಿ ನೀಡಿದೆ.

ಐಪಿಎಲ್‌ನ 15ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 160 ರನ್ ಗಳಿಸಿದೆ.

ಇನಿಂಗ್ಸ್ ಆರಂಭಿಸಿದ ರಹಾನೆ(36,19 ಎಸೆತ, 5 ಬೌಂಡರಿ,1 ಸಿಕ್ಸರ್) ಹಾಗೂ ಶಾರ್ಟ್(44,43 ಎಸೆತ, 5 ಬೌಂಡರಿ, 1 ಸಿಕ್ಸರ್)ಮೊದಲ ವಿಕೆಟ್‌ಗೆ 54 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.

ಆದರೆ, ಈ ಇಬ್ಬರು ಬೇರ್ಪಟ್ಟ ಬಳಿಕ ರಾಜಸ್ಥಾನ ಕುಸಿತದ ಹಾದಿ ಹಿಡಿಯಿತು. ರಾಹುಲ್ ತ್ರಿಪಾಠಿ(15), ಬೆನ್ ಸ್ಟೋಕ್ಸ್(14) ದೊಡ್ಡ ಮೊತ್ತ ಗಳಿಸಲು ವಿಫಲರಾದರು.ಕೆ.ಗೌತಮ್(12)ಹಾಗೂ ಜೋಸ್ ಬಟ್ಲರ್(ಔಟಾಗದೆ 24) ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಕೋಲ್ಕತಾದ ಪರ ನಿತೀಶ್ ರಾಣಾ(2-11)ಹಾಗೂ ಕುರ್ರನ್(2-19) ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News