ಅನಿವಾಸಿ ಭಾರತೀಯ ಕಾಂಗ್ರೆಸ್ ಅಲ್ ತಾಯಿಫ್ ಘಟಕ ವತಿಯಿಂದ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ

Update: 2018-04-19 03:00 GMT

ತಾಯಿಫ್, ಎ. 18: ಅನಿವಾಸಿ ಭಾರತೀಯ ಕಾಂಗ್ರೆಸ್ ಅಲ್ ತಾಯಿಫ್ ಘಟಕದ ವತಿಯಿಂದ ಕಥುವಾದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಖಂಡನ ಸಭೆ ಅಲ್ ತಾಯಿಫ್ ಘಟಕದ ಕಾರ್ಯಾಲಯದಲ್ಲಿ ನಡೆಯಿತು.

ತಾಯಿಫ್ ಘಟಕದ ಅಧ್ಯಕ್ಷ ಇಬ್ರಾಹಿಂ ಕನ್ನಂಗಾರ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಸೌದಿ ಅರೇಬಿಯಾದ ಬ್ರಿಗೇಡಿಯರ್ ಜನರಲ್ ಕರ್ನಲ್ ಆಗಿರುವ ಮುಹಮ್ಮದ್ ಅಲಿ ಅಲ್ ಝಹ್ರಾನಿ ಕ್ಯಾಂಡಲ್ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಅಧ್ಯಕ್ಷರಾದ ಇಬ್ರಾಹಿಂ ಕನ್ನಂಗಾರ್ ಅವರು ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ನಂತರ ನಡೆದ ಹಲವು ಅತ್ಯಾಚಾರ ಪ್ರಕರಣ ಗಳನ್ನು ಹಾಗೂ ಭ್ರಷ್ಟಾಚಾರದ ಬಗ್ಗೆ ವಿವರಿಸಿ ಖಂಡಿಸಿದರು. ಮುಂದಿನ ದಿನಗಳಲ್ಲಿ ನಡೆಯಲಿರುವ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಾಚಾರಿ ಹಾಗೂ ಭ್ರಷ್ಟಾಚಾರಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ದೂರವಿಟ್ಟು ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲಿಸಿ ಕೊಡಬೇಕು ಎಂದು ಹೇಳಿದರು.

ಬಿಜೆಪಿ ಹಠಾವೋ, ಬೇಟಿ ಬಚಾವೋ ಎಂಬ ವಾಕ್ಯ ಕಾರ್ಯಕ್ರಮದ ಉದ್ದಕ್ಕೂ ಮೊಲಗುತ್ತಿತ್ತು. ಬಳಿಕ ಅನಿವಾಸಿ ಭಾರತೀಯ ಕಾಂಗ್ರೆಸ್ ಪಕ್ಷ ತಾಯಿಫ್ ಘಟಕದ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಗುರುಪುರ ಹಾಗೂ ಉಪಾಧ್ಯಕ್ಷ ಝುಬೈರ್ ತುಂಬೆ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರಕಾರದ ದುರಾಡಳಿತ ಬಗ್ಗೆ ಖಂಡಿಸಿ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಇಂಮ್ತಿಯಾಝ್ ಕುಂದಾಪುರ, ಯೂನುಸ್ ಸೀಕೊ, ಮಲಿಕ್ ಇಡ್ಯ, ಸಂಶುದ್ದೀನ್ ಕಾಟಿಪಳ್ಳ, ಸದಕ ಅಡ್ಡೂರ್, ನಝೀರ್ ಕುಪ್ಪೆಪದವು, ಹಸನ್ ಕುಲಾಯಿ, ಶಮೀರ್ ತುಂಬೆ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಬೂಬಕರ್ ಕಡಬ ಕಾರ್ಯಕ್ರಮ ನಿರೂಪಿಸಿದರು. 

Full View

Writer - ನಿಝಾಮ್ ಬಿ.ಎಸ್ ಸುರಲ್ಪಾಡಿ

contributor

Editor - ನಿಝಾಮ್ ಬಿ.ಎಸ್ ಸುರಲ್ಪಾಡಿ

contributor

Similar News