ಐಐಎಂ-ಎನ್‌ನಲ್ಲಿ ಸಹಾಯಕ ನಿರ್ದೇಶಕ ಹುದ್ದೆ ಪಡೆದ ಟೈಲರ್ ಮಗ

Update: 2018-04-19 15:19 GMT

ಕೊಚ್ಚಿ, ಎ.19: ಕಡುಬಡತನದಲ್ಲಿ ಬೆಳೆದು ಬಂದ ಟೈಲರ್‌ನ ಪುತ್ರ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್-ನಾಗ್ಪುರ (ಐಐಎಂ-ಎನ್)ನಲ್ಲಿ ಕಲಿತು ಅದೇ ಸಂಸ್ಥೆಯಲ್ಲಿ ಸಹಾಯಕ ನಿರ್ದೇಶಕ ಹುದ್ದೆಯನ್ನು ಗಳಿಸಿದ ಅತೀಹೆಚ್ಚು ವೇತನ ಪಡೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

27ರ ಹರೆಯದ ಜಸ್ಟಿನ್ ಫೆರ್ನಾಂಡಿಸ್ ತಂದೆ ವೃತ್ತಿಯಲ್ಲಿ ಟೈಲರ್ ಆಗಿದ್ದಾರೆ. ಸರಕಾರ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ನೀಡುವ ರೇಶನ್ ಅಕ್ಕಿಯೇ ಈ ಕುಟುಂಬದ ಪ್ರಮುಖ ಆಹಾರವಾಗಿತ್ತು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ತಮ್ಮ ಗುರಿಯಿಂದ ವಿಚಲಿತಗೊಳ್ಳದ ಜಸ್ಟಿನ್ ಕಠಿಣ ಸಾಧನೆ ಮಾಡಿ ಕೊನೆಗೂ ತಮ್ಮ ಕನಸನ್ನು ನನಸಾಗಿಸಿದ್ದಾರೆ. ಸದ್ಯ ಜಸ್ಟಿನ್‌ರನ್ನು ಐಐಎಂ-ಎನ್ ಸಹಾಯಕ ನಿರ್ದೇಶಕ ಹುದ್ದೆಗೆ ಆಯ್ಕೆ ಮಾಡಿದ್ದು ವಾರ್ಷಿಕ 19 ಲಕ್ಷ ರೂ. ವೇತನ ನೀಡಲು ನಿರ್ಧರಿಸಿದೆ. ಈ ಹುದ್ದೆ ಮತ್ತು ಇಷ್ಟು ವೇತನ ಈ ಹಿಂದೆ ಯಾವ ಐಐಎಂ-ಎನ್ ವಿದ್ಯಾರ್ಥಿಗೂ ನೀಡಲಾಗಿಲ್ಲ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News