ಜೊಕೊವಿಕ್‌ಗೆ ಶಾಕ್ ನೀಡಿದ ಥೀಮ್

Update: 2018-04-19 18:57 GMT

ಮಾಂಟೆಕಾರ್ಲೊ, ಎ.19: ಮೂರನೇ ಸುತ್ತಿನ ಪಂದ್ಯದಲ್ಲಿ ಡೊಮಿನಿಕ್ ಥೀಮ್‌ಗೆ ಶರಣಾದ ನೊವಾಕ್ ಜೊಕೊವಿಕ್ ಮಾಂಟೆಕಾರ್ಲೊ ಮಾಸ್ಟರ್ಸ್ ಟೆನಿಸ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಎರಡು ಬಾರಿ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್‌ಗೆ ತಲುಪಿರುವ ಥೀಮ್ ಕ್ವಾರ್ಟರ್ ಫೈನಲ್‌ನಲ್ಲಿ ರಫೆಲ್ ನಡಾಲ್ ಅಥವಾ ರಶ್ಯದ ಕರೆನ್ ಖಚನೊವ್‌ರನ್ನು ಎದುರಿಸುವ ಸಾಧ್ಯತೆಯಿದೆ.

 ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜೊಕೊವಿಕ್ ವಿರುದ್ಧ ಥೀಮ್ ಅವರು 6-7(2/7), 6-2, 6-3 ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ.

ಕಳೆದ ವರ್ಷ ವಿಂಬಲ್ಡನ್ ಟೂರ್ನಿಯಲ್ಲಿ ಗಾಯಗೊಂಡ ಬಳಿಕ 12 ಬಾರಿಯ ಚಾಂಪಿಯನ್ ಜೊಕೊವಿಕ್ ಈತನಕ ಕ್ವಾರ್ಟರ್ ಫೈನಲ್‌ಗೆ ತಲುಪಿಲ್ಲ. ಕಳೆದ ವರ್ಷ ಫ್ರೆಂಚ್ ಓಪನ್ ಕ್ವಾರ್ಟರ್‌ಫೈನಲ್‌ನಲ್ಲಿ ಸರ್ಬಿಯ ಆಟಗಾರನನ್ನು ಮಣಿಸಿದ್ದ ಥೀಮ್ ಇದೀಗ ಮತ್ತೊಮ್ಮೆ ಮಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News