ಕಿವೀಸ್ ಮಾಜಿ ದಾಂಡಿಗ ಮೈಕಲ್ ಪ್ಯಾಪ್ಸ್ ನಿವೃತ್ತಿ

Update: 2018-04-19 19:02 GMT

ಮೆಲ್ಬೋರ್ನ್, ಎ.19: ನ್ಯೂಝಿಲೆಂಡ್‌ನ ದೇಶೀಯ ಕ್ರಿಕೆಟ್ ದಂತಕತೆ ಮೈಕಲ್ ಪ್ಯಾಪ್ಸ್ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.

39ರ ಹರೆಯದ ಮೈಕಲ್ ಕಿವೀಸ್ ಪರ 2004 ರಿಂದ 2007ರ ನಡುವೆ 14 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು. ನ್ಯೂಝಿಲೆಂಡ್‌ನ ಪ್ರಥಮ ದರ್ಜೆ ದೇಶೀಯ ಚಾಂಪಿಯನ್‌ಶಿಪ್ ಪ್ಲಂಕೆಟ್ ಶೀಲ್ಡ್‌ನಲ್ಲಿ 10,000ಕ್ಕೂ ಅಧಿಕ ರನ್ ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

1998-99ರ ಋತುವಿನಲ್ಲಿ ಮೈಕಲ್ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. 188 ಪಂದ್ಯಗಳಲ್ಲಿ 38.66ರ ಸರಾಸರಿಯಲ್ಲಿ 12,294 ರನ್ ಗಳಿಸಿದ್ದಾರೆ. ಇದರಲ್ಲಿ 33 ಶತಕಗಳಿದ್ದು, ಗರಿಷ್ಠ ಸ್ಕೋರ್ 316.

ಏಕದಿನ ಕ್ರಿಕೆಟ್‌ನಲ್ಲಿ ಕೇವಲ 6 ಪಂದ್ಯಗಳನ್ನು ಆಡಿರುವ ಮೈಕಲ್ ಒಟ್ಟು 207 ರನ್ ಗಳಿಸಿದ್ದು ಗರಿಷ್ಠ ಔಟಾಗದೆ 92 ರನ್ ಗಳಿಸಿದ್ದಾರೆ. 8 ಟೆಸ್ಟ್ ಪಂದ್ಯಗಳನ್ನು ಆಡಿರುವ ಮೈಕಲ್ ತನ್ನ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು. 2004ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಚೊಚ್ಚಲ ಪಂದ್ಯ ಆಡಿದ್ದ ಮೈಕಲ್ 2008ರಲ್ಲಿ ಅದೇ ತಂಡದ ವಿರುದ್ಧ ಕೊನೆಯ ಪಂದ್ಯ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News