ವಿಶ್ವ ಇಲೆವೆನ್ ತಂಡಕ್ಕೆ ಅಫ್ರಿದಿ, ಮಲಿಕ್ ಆಯ್ಕೆ

Update: 2018-04-19 19:05 GMT

ದುಬೈ, ಎ.19: ಲಾರ್ಡ್ಸ್‌ನಲ್ಲಿ ಮೇ 31 ರಂದು ನಡೆಯಲಿರುವ ವೆಸ್ಟ್‌ಇಂಡೀಸ್ ವಿರುದ್ಧದ ಟ್ವೆಂಟಿ-20 ಇಂಟರ್‌ನ್ಯಾಶನಲ್ ಪಂದ್ಯದಲ್ಲಿ ವಿಶ್ವ ಇಲೆವೆನ್ ತಂಡದ ಪರ ಶಾಹಿದ್ ಅಫ್ರಿದಿ, ಶುಐಬ್ ಮಲಿಕ್ ಹಾಗೂ ತಿಸಾರ ಪೆರೇರ ಆಡಲಿದ್ದಾರೆ. ಕಳೆದ ವರ್ಷ ಸಂಭವಿಸಿದ ಇರ್ಮಾ ಹಾಗೂ ಮಾರಿಯಾ ಚಂಡಮಾರುತಕ್ಕೆ ಹಾನಿಗೊಂಡಿರುವ ವೆಸ್ಟ್‌ಇಂಡೀಸ್‌ನ ಐದು ಪ್ರಮುಖ ಕ್ರಿಕೆಟ್ ಸ್ಟೇಡಿಯಂಗಳ ಪುನರ್‌ನಿರ್ಮಾಣಕ್ಕೆ ಹಣ ಸಂಗ್ರಹಿಸುವ ಉದ್ದೇಶದಿಂದ ವೆಸ್ಟ್‌ಇಂಡೀಸ್ ಹಾಗೂ ವಿಶ್ವ ಇಲೆವೆನ್ ತಂಡಗಳ ನಡುವೆ ಸಹಾಯಾರ್ಥ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿದೆ.

ಅಫ್ರಿದಿ ಹಾಗೂ ಮಲಿಕ್ 2009ರಲ್ಲಿ ಐಸಿಸಿ ಟ್ವೆಂಟಿ-20 ವಿಶ್ವಕಪ್ ಜಯಿಸಿದ ಪಾಕಿಸ್ತಾನದ ತಂಡದ ಸದಸ್ಯರಾಗಿದ್ದರು. ಪೆರೇರ 2014ರಲ್ಲಿ ಢಾಕಾದಲ್ಲಿ ಪ್ರಶಸ್ತಿ ಜಯಿಸಿದ ಶ್ರೀಲಂಕಾ ತಂಡದ ಭಾಗವಾಗಿದ್ದರು.

2017ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ವಿಶ್ವ ಇಲೆವೆನ್ ತಂಡದ ಪರ ಪೆರೇರ ಭಾಗವಹಿಸಿದ್ದರು.

ಕಾರ್ಲೊಸ್ ಬ್ರಾತ್‌ವೇಟ್ ನೇತೃತ್ವದ ವೆಸ್ಟ್‌ಇಂಡೀಸ್ ತಂಡದಲ್ಲಿ ಕ್ರಿಸ್ ಗೇಲ್, ಮರ್ಲಾನ್ ಸ್ಯಾಮುಯೆಲ್ಸ್, ಸ್ಯಾಮುಯೆಲ್ ಬದ್ರೀ ಹಾಗೂ ಆ್ಯಂಡ್ರೆ ರಸ್ಸಲ್‌ರಂತಹ ಸ್ಟಾರ್ ಆಟಗಾರರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News