ರಾಜ್ಯ ವಿಧಾನಸಭಾ ಚುನಾವಣೆ: ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ

Update: 2018-04-20 12:55 GMT
ಅಮರನಾಥ ಶೆಟ್ಟಿ

ಬೆಂಗಳೂರು, ಎ. 20: ರಾಜ್ಯ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿ ನೀಡಲು ಸನ್ನದ್ಧವಾಗಿರುವ ಜೆಡಿಎಸ್ 57 ಅಭ್ಯರ್ಥಿಗಳ ಎರಡನೆ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು, ಕಾಂಗ್ರೆಸ್-ಬಿಜೆಪಿ ಟಿಕೆಟ್ ವಂಚಿತ ವಲಸಿಗರಿಗೆ ಮಣೆ ಹಾಕಿದೆ.

ಬಿಜೆಪಿ ಟಿಕೆಟ್ ವಂಚಿತ ಚಿತ್ರನಟಿ ಅಮೂಲ್ಯ ಮಾವ ಜಿ.ಹೆಚ್.ರಾಮಚಂದ್ರ ಅವರಿಗೆ ರಾಜರಾಜೇಶ್ವರಿನಗರ, ಡಾ.ಹೇಮಚಂದ್ರ ಸಾಗರ್-ಚಿಕ್ಕಪೇಟೆ, ಪ್ರಕಾಶ್ ಖಂಡ್ರೆ-ಬಾಲ್ಕಿ, ಕಾಂಗ್ರೆಸಿನ ಪಿ.ರಮೇಶ್-ಸಿ.ವಿ.ರಾಮನ್‌ನಗರ, ನಟ ಶಶಿಕುಮಾರ್- ಹೊಸದುರ್ಗ ಕ್ಷೇತ್ರದಿಂದ ಟಿಕೆಟ್ ಪ್ರಕಟಿಸಲಾಗಿದೆ.

ಚುನಾವಣೆ ಘೋಷಣೆಗೆ ಮುನ್ನ ಮೊದಲ ಹಂತದಲ್ಲಿ 126 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿರುವ ಜೆಡಿಎಸ್, ಇದೀಗ 57 ಅಭ್ಯರ್ಥಿಗಳ ಎರಡನೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 183 ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಉಳಿದ ಕ್ಷೇತ್ರಗಳಿಗೆ ಒಂದೆರಡು ದಿನಗಳಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸುವ ಸಾಧ್ಯತೆಗಳಿವೆ.

ಅಭ್ಯರ್ಥಿಗಳ ಪಟ್ಟಿ: ಕಾಗವಾಡ-ಮೊಂಗಣ್ಣನವರ್, ಕುಡಚಿ(ಎಸ್ಸಿ)- ರಾಜೇಂದ್ರಣ್ಣಪ್ಪ ಹಳಿಹೊಳಿ, ಹುಕ್ಕೇರಿ-ಎಂ.ಬಿ.ಪಾಟೀಲ್, ಗೋಕಾಕ್-ಕರಿಯಪ್ಪ ಲಕ್ಷ್ಮಣ ತಲವಾರ್, ಯಮಕನಮರಡಿ(ಎಸ್ಟಿ)-ಶಂಕರ್ ಬರಮಗಸ್ತಿ, ಬೆಳಗಾವಿ ಉತ್ತರ -ಧರ್ಮರಾಜ್, ಖಾನಾಪುರ- ನಾಸೀರ್ ಭಗವಾನ್, ಸವದತ್ತಿ-ಡಿ.ಎಫ್. ಪಾಟೀಲ, ಮುಧೋಳ(ಎಸ್ಸಿ)-ಶಂಕರ್ ನಾಯ್ಕಿ, ಜಮಖಂಡಿ-ಸದಾಶಿವಮೂರ್ತಿ ಕಲಾಲ್, ಬೀಳಗಿ-ಸಂಗಪ್ಪ ತೆರದಾಳ, ಹುನಗುಂದ- ಶಿವಣ್ಣಗೌಡ, ಮುದ್ದೇಬಿಹಾಳ- ಮಂಗಳದೇವಿ ಬಿರಾದಾರ್, ದೇವರಹಿಪ್ಪರಗಿ-ರಾಜುಗೌಡ ಪಾಟೀಲ.

ಸೇಡಂ- ಸುನೀತಾ, ಬಸವಕಲ್ಯಾಣ-ಪಿಜಿಆರ್ ಸಿಂಧ್ಯಾ, ಭಾಲ್ಕಿ-ಪ್ರಕಾಶ್ ಖಂಡ್ರೆ, ಔರಾದ್(ಎಸ್ಸಿ)-ಧನಂಜಯ ಜಾಧವ್, ರಾಯಚೂರು ಗ್ರಾಮಾಂತರ (ಎಸ್ಟಿ)-ರವಿಪಾಟೀಲ, ರಾಯಚೂರು-ಮಹಾಂತೇಶ್ ಪಾಟೀಲ, ಗಂಗಾವತಿ- ಕರಿಯಣ್ಣ ಸಂಗಟಿ, ಕೊಪ್ಪಳ-ಸೈಯದ್, ರೋಣ-ರವಿ ದೊಡ್ಡಮಟ್ಟಿ, ನರಗುಂದ- ಗಿರೀಶ್ ಪಾಟೀಲ, ಕಲಘಟಗಿ-ನಿಂಬಣ್ಣ, ಶಿಗ್ಗಾವಿ-ಅಶೋಕ್ ಬೇವಿನಮರದ್, ಹೂವಿನಹಡಗಲಿ(ಎಸ್ಸಿ)-ಪುಟ್ಟರೇಶ್, ಹಗರಿಬೊಮ್ಮನಹಳ್ಳಿ(ಎಸ್ಸಿ)-ಕೃಷ್ಣನಾಯ್ಕಿ, ಕಂಪ್ಲಿ(ಎಸ್ಟಿ)-ಬಿ.ನಾರಾಯಣಪ್ಪ.

ಸಿರಗುಪ್ಪ(ಎಸ್ಟಿ)-ಜಿ.ಕೆ.ಹನುಮಂತಪ್ಪ, ಬಳ್ಳಾರಿ(ಎಸ್ಟಿ)-ತಾಯಣ್ಣ, ಬಳ್ಳಾರಿನಗರ- ಇಕ್ಬಾಲ್ ಅಹ್ಮದ್, ಹೊಸದುರ್ಗ-ಶಶಿಕುಮಾರ್, ಜಗಲೂರು(ಎಸ್ಟಿ)-ದೇವೇಂದ್ರಪ್ಪ, ದಾವಣಗೆರೆ ಉತ್ತರ-ವಡ್ನಾಳ್ ಶಿವಶಂಕರ್, ದಾವಣಗೆರೆ ದಕ್ಷಿಣ-ಅಮಾನುಲ್ಲಾ ಖಾನ್, ಕುಂದಾಪುರ-ಟಿ.ಪ್ರಕಾಶ್ ಶೆಟ್ಟಿ, ತರೀಕೆರೆ-ಶಿವಶಂಕರಪ್ಪ, ಗೌರಿಬಿದನೂರು- ನರಸಿಂಹಮೂರ್ತಿ.

ರಾಜರಾಜೇಶ್ವರಿ ನಗರ-ರಾಮಚಂದ್ರ, ಮಲ್ಲೇಶ್ವರಂ-ಮಧುಸೂದನ್, ಸಿ.ವಿ. ರಾಮನ್‌ನಗರ(ಎಸ್ಸಿ)-ರಮೇಶ್, ಶಾಂತಿನಗರ-ಶ್ರೀಧರ್ ರೆಡ್ಡಿ, ರಾಜಾಜಿನಗರ- ಜೇಡರಹಳ್ಳಿ ಕೃಷ್ಣಪ್ಪ, ಚಾಮರಾಜಪೇಟೆ-ಅಲ್ತಾಫ್, ಚಿಕ್ಕಪೇಟೆ-ಹೇಮಚಂದ್ರ ಸಾಗರ್, ಜಯನಗರ-ತನ್ವೀರ್ ಅಹ್ಮದ್.

ಬೆಂಗಳೂರು ದಕ್ಷಿಣ-ಪ್ರಭಾಕರ್ ರೆಡ್ಡಿ, ಚನ್ನಪಟ್ಟಣ-ಎಚ್.ಡಿ.ಕುಮಾರಸ್ವಾಮಿ, ಮಂಡ್ಯ-ಎಂ.ಶ್ರೀನಿವಾಸ್, ಮೂಡಬಿದರೆ- ಅಮರನಾಥ್ ಶೆಟ್ಟಿ, ನಂಜನಗೂಡು (ಎಸ್ಸಿ)-ದಯಾನಂದ್, ಹನೂರು-ಮಂಜುನಾಥ್, ಬೊಮ್ಮನಹಳ್ಳಿ-ಎನ್. ಸೋಮಶೇಖರ್, ಕನಕಪುರ- ನಾರಾಯಣಗೌಡ, ಅಫ್ಜಲ್‌ಪುರ-ಗೋವಿಂದಭಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News