ಸೂಪರ್‌ಕಪ್ ಬಾಚಿಕೊಂಡ ಬೆಂಗಳೂರು ಎಫ್‌ಸಿ

Update: 2018-04-20 18:31 GMT

ಭುವನೇಶ್ವರ, ಎ.20: ನಾಯಕ ಸುನೀಲ್ ಚೆಟ್ರಿ ನೇತೃತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದ ಬೆಂಗಳೂರು ಎಫ್‌ಸಿ ತಂಡ ಮೊದಲ ಆವೃತ್ತಿಯ ಸೂಪರ್‌ಕಪ್ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.

ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡ 10 ಆಟಗಾರರಿದ್ದ ಈಸ್ಟ್ ಬಂಗಾಳ ತಂಡವನ್ನು 4-1 ಗೋಲುಗಳಿಂದ ಮಣಿಸಿತು.

ನಾಯಕ ಚೆಟ್ರಿ ಅವಳಿ ಗೋಲು ಬಾರಿಸಿದರು. ರಾಹುಲ್ ಭೆಕೆ 40ನೇ ನಿಮಿಷದಲ್ಲಿ ಹೆಡರ್‌ನ ಮೂಲಕ ಗೋಲು ಬಾರಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಬಂಗಾಳದ ಸ್ಟ್ರೈಕರ್ ಅನ್ಸುಮಾನ್ 28ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು.

 ಚೆಟ್ರಿ 69ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ತಂಡದ ಮುನ್ನಡೆಯನ್ನು 2-1 ಗೆ ಹೆಚ್ಚಿಸಿದರು.

ನಿಕೊಲ್ಸ್ ಫೆಡರ್ 71ನೇ ನಿಮಿಷದಲ್ಲಿ ಗೋಲು ಬಾರಿಸಿ ಭಾರತಕ್ಕೆ 3-1 ಮುನ್ನಡೆ ಒದಗಿಸಿಕೊಟ್ಟರು. 90ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ನಾಯಕ ಚೆಟ್ರಿ ಭಾರತಕ್ಕೆ 4-1 ಅಂತರದ ಭರ್ಜರಿ ಗೆಲುವು ತಂದುಕೊಟ್ಟರು.

ಬೆಂಗಳೂರು ಕಳೆದ 5 ಋತುವಿನಲ್ಲಿ ಪ್ರತಿ ಬಾರಿಯೂ ಟ್ರೋಫಿ ಜಯಿಸಿದ ದಾಖಲೆಯನ್ನು ಕಾಯ್ದುಕೊಂಡಿದೆ. ಬೆಂಗಳೂರು ಕಡಿಮೆ ಅವಧಿಯಲ್ಲಿ ಐದು ಟ್ರೋಫಿಗಳನ್ನು ಜಯಿಸಿದೆ. ಇದರಲ್ಲಿ ಎರಡು ಐ-ಲೀಗ್ ಪ್ರಶಸ್ತಿ ಹಾಗೂ ಎರಡು ಫೆಡರೇಶನ್ ಕಪ್ ಪ್ರಶಸ್ತಿಯೂ ಸೇರಿದೆ. ಇದೀಗ ಸೂಪರ್‌ಕಪ್‌ನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News