ಎರಡು ಬಾರಿ ಕ್ಯಾಚ್ ಕೈ ಚೆಲ್ಲಿದ್ದ ತ್ರಿಪಾಠಿ

Update: 2018-04-21 18:57 GMT

ಪುಣೆ,ಎ.21: ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶೇನ್ ವಾಟ್ಸನ್‌ಗೆ ಒಮ್ಮೆ ಅಲ್ಲ ಎರಡು ಬಾರಿ ಜೀವದಾನ ಸಿಕ್ಕಿತು. ರಾಜಸ್ಥಾನ ರಾಯಲ್ಸ್ ತಂಡದ ರಾಹುಲ್ ತ್ರಿಪಾಠಿ ಎರಡು ಬಾರಿ ಕ್ಯಾಚ್ ಕೈ ಬಿಟ್ಟರು. ಇದರ ಪ್ರಯೋಜನ ಪಡೆದ ವ್ಯಾಟ್ಸನ್ ಶತಕ ಬಾರಿಸಿದರು. ವಾಟ್ಸನ್ ಭರ್ಜರಿ ಹೊಡೆತಗಳ ಮೂಲಕ ಬ್ಯಾಟಿಂಗ್ ಆರಂಭಿಸಿದ್ದರು. ಸ್ಟುವರ್ಟ್ ಬಿನ್ನಿ ಅವರ ಓವರ್‌ನಲ್ಲಿ ಸತತ ಎರಡು ಬೌಂಡರಿ ಬಾರಿಸಿ ದೊಡ್ಡ ಮೊತ್ತದ ಸ್ಕೋರ್ ದಾಖಲಿಸಿದ್ದರು. ಅದೇ ಓವರ್‌ನ ಐದನೇ ಎಸೆತದಲ್ಲಿ ವಾಟ್ಸನ್ ಔಟಾಗುವ ಅವಕಾಶ ಇತ್ತು. ಆದರೆ ತ್ರಿಪಾಠಿ ಕ್ಯಾಚ್ ಕೈ ಚೆಲ್ಲಿದರು. ಸ್ಪಿನ್ನರ್ ಕೆ. ಗೌತಮ್‌ರ ಎರಡನೇ ಓವರ್‌ನ ಐದನೇ ಎಸೆತದಲ್ಲಿ ವಾಟ್ಸನ್ ಮೊದಲ ಸಿಕ್ಸರ್ ಬಾರಿಸಿದರು. ಮುಂದಿನ ಎಸೆತದಲ್ಲಿ ವಾಟ್ಸನ್ ಕ್ಯಾಚ್ ನೀಡಿದರು. ಆದರೆ ತ್ರಿಪಾಠಿ ಕ್ಯಾಚ್ ಪಡೆಯುವಲ್ಲಿ ವಿಫಲರಾದರು. ಒಂದು ವೇಳೆ ತ್ರಿಪಾಠಿ ಕ್ಯಾಚ್ ಪಡೆಯುತ್ತಿದ್ದರೆ ವಾಟ್ಸನ್ ಬ್ಯಾಟಿಂಗ್18ರಲ್ಲಿ ಕೊನೆಗೊಳ್ಳುತ್ತಿತ್ತು. ವಾಟ್ಸನ್ 106 ರನ್(57ಎ, 9ಬೌ,6ಸಿ) ಗಳಿಸಿ ಔಟಾದರು. ವಾಟ್ಸನ್ ಐಪಿಎಲ್‌ನಲ್ಲಿ ಮೂರನೇ ಶತಕ ದಾಖಲಿಸಿದ್ದರು. ಇದರಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 64 ರನ್‌ಗಳ ಜಯ ಗಳಿಸಿತ್ತು.

ವಾಟ್ಸನ್ ಶತಕದ ಮೂಲಕ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

  ಗುರುವಾರ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ವೃದ್ಧಿಮಾನ್ ಸಹಾ ಕ್ಯಾಚ್ ಕೈಚೆಲ್ಲಿದ್ದ ಹಿನ್ನೆಲೆಯಲ್ಲಿ ಕ್ರಿಸ್ ಗೇಲ್‌ಗೆ ಆಕರ್ಷಕ ಶತಕ ದಾಖಲಿಸಲು ಸಾಧ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News