ಚೆನ್ನೈ ಸೂಪರ್ ಕಿಂಗ್ಸ್ 182/3

Update: 2018-04-22 12:32 GMT

ಹೈದರಾಬಾದ್, ಎ.22: ಐಪಿಎಲ್ ಟ್ವೆಂಟಿ-20 ಟೂರ್ನಿಯ 20ನೇ ಪಂದ್ಯದಲ್ಲಿ ಸನ್ ರೈಸರ್ಸ್  ಹೈದರಾಬಾದ್ ತಂಡದ  ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 182 ರನ್ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಚೆನ್ನೈ ತಂಡಕ್ಕೆ ಅಂಬಟಿ ರಾಯುಡು 79 ರನ್(37ಎ, 9ಬೌ,4ಸಿ),  ಸುರೇಶ್ ರೈನಾ ಔಟಾಗದೆ 54ರನ್ (43ಎ, 5ಬೌ,2ಸಿ) ಮಹೇಂದ್ರ ಸಿಂಗ್ ಧೋನಿ ಔಟಾಗದೆ 25 ರನ್ (12ಎ, 3ಬೌ,1ಸಿ) ಗಳಿಸಿದರು.

ಶೇನ್ ವಾಟ್ಸನ್ 9ರನ್ ಮತ್ತು ಎಫ್ ಡು ಪ್ಲೆಸಿಸ್ 11 ರನ್ ಗಳಿಸಿದರು.

ಭುವನೇಶ್ವರ ಕುಮಾರ್ 22ಕ್ಕೆ 1 ವಿಕೆಟ್ ಪಡೆದರು.  

 .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News