13 ವರ್ಷದ ಬಾಲಕಿಯ ಒತ್ತೆ ಸೆರೆ ಇರಿಸಿ ಆತ್ಯಾಚಾರಗೈದ ವೈದ್ಯ

Update: 2018-04-22 14:59 GMT

ಮುಝಾಪ್ಫರ್ ನಗರ, ಎ. 22: ಇಲ್ಲಿನ ಗ್ರಾಮವೊಂದರ ಕ್ಲಿನಿಕ್‌ನಲ್ಲಿ ವೈದ್ಯನೋರ್ವ 13 ವರ್ಷದ ಬಾಲಕಿಯನ್ನು ಒತ್ತೆ ಸೆರೆ ಇರಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯನ ಒತ್ತೆ ಸೆರೆಯಲ್ಲಿದ್ದ ಬಾಲಕಿ ಪರಾರಿಯಾಗಿ ಶುಕ್ರವಾರ ತನ್ನ ತಂದೆಗೆ ವಿಷಯ ತಿಳಿಸಿದ್ದಾಳೆ ಎಂದು ಸರ್ಕಲ್ ಆಫೀಸರ್ ಎಸ್‌ಕೆಎಸ್ ಪ್ರತಾಪ್ ತಿಳಿಸಿದ್ದಾರೆ. 

ಬಾಲಕಿಯ ತಂದೆ ನೀಡಿದ ದೂರಿನ ಆಧಾರದಲ್ಲಿ ವೈದ್ಯ ಸೋನು ವರ್ಮಾ ಅವರನ್ನು ಬಂಧಿಸಲಾಗಿದೆ ಹಾಗೂ ಅವರ ಕ್ಲಿನಿಕ್‌ಗೆ ಬೀಗ ಜಡಿಯಲಾಗಿದೆ. ಕ್ಲಿನಿಕ್‌ನಿಂದ ಕೆಲವು ಆಕ್ಷೇಪಾರ್ಹ ವಸ್ತುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News