ಐಪಿಎಲ್ : ಮುಂಬೈ ಇಂಡಿಯನ್ಸ್ 167/7

Update: 2018-04-22 16:31 GMT

ಜೈಪುರ, ಎ.22: ಐಪಿಎಲ್ ಟ್ವೆಂಟಿ-20 ಟೂರ್ನಿಯ 21ನೇ ಪಂದ್ಯದಲ್ಲಿ ರವಿವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7ವಿಕೆಟ್ ನಷ್ಟದಲ್ಲಿ 167ರನ್ ಗಳಿಸಿದೆ.

 ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡಕ್ಕೆ ಆರಂಭಿಕ ದಾಂಡಿಗ ಸೂರ್ಯಕುಮಾರ್ ಯಾದವ್ ಮತ್ತು ವಿಕೆಟ್ ಕೀಪರ್ ಇಶಾನ್ ಕಿಶನ್ ಉಪಯುಕ್ತ ಅರ್ಧಶತಕಗಳ ಕೊಡುಗೆ ನೀಡಿದರು.

ಆರಂಭಿಕ ದಾಂಡಿಗ ಎವಿನ್ ಲೆವಿಸ್(0) ವಿಕೆಟ್‌ನ್ನು ಮುಂಬೈ ಇಂಡಿಯನ್ಸ್ ಕಳೆದುಕೊಂಡರೂ, ಬಳಿಕ ಎರಡನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಮತ್ತು ಕಿಶನ್ ಜೊತೆಯಾಟದಲ್ಲಿ 129 ರನ್ ಸೇರಿಸಿದರು.

ಸೂರ್ಯಕುಮಾರ್ ಯಾದವ್ 72 ರನ್(47ಎ, 6ಬೌ,3ಸಿ) ಮತ್ತು ಕಿಶನ್ 58ರನ್(42ಎ, 4ಬೌ,3ಸಿ) ಗಳಿಸಿದರು. ಇವರು ಔಟಾದ ಬಳಿಕ ತಂಡದ ಬ್ಯಾಟಿಂಗ್ ಸೊರಗಿತು. ಕೃನಾಲ್ ಪಾಂಡ್ಯ 7ರನ್ ಮತ್ತು ಹಾರ್ದಿಕ್ ಪಾಂಡ್ಯ 4 ರನ್ ಗಳಿಸಿದರು. ನಾಯಕ ರೋಹಿತ್ ಶರ್ಮಾ (0)ಮತ್ತು ಮೆಕ್ಲೀನಘನ್ (0)ಸೊನ್ನೆ ಸುತ್ತಿದರು. ಕೊನೆಯಲ್ಲಿ ಕೀರನ್ ಪೊಲಾರ್ಡ್ ಔಟಾಗದೆ 21ರನ್(20ಎ, 1 ಬೌ,1ಸಿ) ಗಳಿಸಿ ತಂಡದ ಸ್ಕೋರ್ 167ಕ್ಕೆ ತಲುಪಲು ನೆರವಾದರು.

ಧವಳ್ ಕುಲಕರ್ಣಿ 32ಕ್ಕೆ 2 ಮತ್ತು ಜೊಫ್ರಾ ಅರ್ಚರ್ 23ಕ್ಕೆ 3, ಜಯದೇವ್ ಉನಾದ್ಕಟ್ 31ಕ್ಕೆ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News