ಐಪಿಎಲ್ 2018 : ರಾಜಸ್ಥಾನ ರಾಯಲ್ಸ್ ಗೆ ಜಯ

Update: 2018-04-22 18:34 GMT

ಜೈಪುರ, ಎ.22: ಐಪಿಎಲ್ ಟ್ವೆಂಟಿ-20 ಟೂರ್ನಿಯ 21ನೇ ಪಂದ್ಯದಲ್ಲಿ ರವಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 3 ವಿಕೆಟ್‌ಗಳ ಜಯ ಗಳಿಸಿದೆ.

ಗೆಲುವಿಗೆ 168 ರನ್‌ಗಳ ಸವಾಲು ಪಡೆದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಗಳಿಸಿತು.

ಸಂಜು ಸ್ಯಾಮ್ಸನ್ 52ರನ್, ಬೆನ್ ಸ್ಟೋಕ್ಸ್ 40 ರನ್ , ಅಜಿಂಕ್ಯ ರಹಾನೆ 14ರನ್, ರಾಹುಲ್ ತ್ರಿಪಾಠಿ 9ರನ್, ಜೋಶ್ ಬಟ್ಲರ್ 6ರನ್, ಜೊಫ್ರಾ ಅರ್ಚೆರ್ 8 ರನ್ ಮತ್ತು ಕೃಷ್ಣಪ್ಪ ಗೌತಮ್ ಔಟಾಗದೆ 33 ರನ್(11ಎ, 4ಬೌ,2ಸಿ) ತಂಡದ ಗೆಲುವಿಗೆ ನೆರವಾದರು. ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7ವಿಕೆಟ್ ನಷ್ಟದಲ್ಲಿ 167ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News