ವ್ಯಕ್ತಿ ಉಯಿಲು ಬರೆದಿಡದೆ ಸತ್ತರೆ ಏನಾಗುತ್ತದೆ...?ಕಾನೂನು ಏನು ಹೇಳುತ್ತದೆ ನೋಡಿ

Update: 2018-04-23 12:38 GMT

ಹೆಚ್ಚಿನವರು ಸಾಯುವ ಮುನ್ನ ದೊಡ್ಡದೊಂದು ತಪ್ಪು ಮಾಡಿರುತ್ತಾರೆ. ಅವರು ತಮ್ಮ ಆಸ್ತಿ ಯಾರಿಗೆ ಸೇರಬೇಕು ಎಂದು ವಿಲ್ ಅಥವಾ ಉಯಿಲು ಬರೆದಿಟ್ಟಿರುವುದಿಲ್ಲ. ಇದು ಸಹಜ,ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ತಾನು ಇಷ್ಟು ಬೇಗ ಸಾಯುವುದಿಲ್ಲ ಎಂಬ ನಂಬಿಕೆಯಿರುತ್ತದೆ. ಮುಂದೆಂದಾದರೂ ಉಯಿಲು ಬರೆದರಾಯಿತು ಎಂದು ದಿನ ದೂಡುತ್ತಿರುತ್ತಾರೆ ಮತ್ತು ಅದೊಂದು ದಿನ ಗೊಟಕ್ಕೆಂದುಬಿಡುತ್ತಾರೆ. ಆಸ್ತಿಯೇ ಇಲ್ಲದವರಾದರೆ ಯಾವುದೇ ತಾಪತ್ರಯವಿಲ್ಲ. ಆದರೆ ಆಸ್ತಿವಂತನಾದರೆ ಸೂಕ್ತ ಉಯಿಲು ಇಲ್ಲದಿದ್ದರೆ ಅದು ಮೃತನ ಕುಟುಂಬಕ್ಕೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮೃತ ವ್ಯಕ್ತಿಯ ವಾರಸುದಾರರು ತನಗೆ ಬರಬೇಕಾದ ಪಾಲನ್ನು ಪಡೆಯಲು ಹೆಚ್ಚು ಕಾಲ ಕಾಯಬೇಕಾಗುತ್ತದೆ ಮತ್ತು ಅದಕ್ಕಾಗಿ ತಗಲುವ ಹೆಚ್ಚಿನ ವೆಚ್ಚವನ್ನೂ ಭರಿಸಬೇಕಾಗುತ್ತದೆ.

ಅಲ್ಲದೆ ವ್ಯಕ್ತಿ ಉಯಿಲು ಬರೆದಿಡದೆ ಸತ್ತಾಗ ಆತನ ಇಚ್ಛೆಗೆ ವಿರುದ್ಧವಾಗಿ ಆಸ್ತಿ ಹಂಚಿಕೆಗೂ ಅದು ಕಾರಣವಾಗಬಹುದು. ಏಕೆಂದರೆ ಇಂತಹ ಸಂದರ್ಭದಲ್ಲಿ ಮೃತವ್ಯಕ್ತಿಯ ಧರ್ಮಕ್ಕೆ ಅನ್ವಯವಾಗುವ ವಾರಸಾ ಕಾನೂನುಗಳಂತೆ ಆಸ್ತಿಯು ಹಂಚಲ್ಪಡುತ್ತದೆ ಮತ್ತು ನಿರ್ದಿಷ್ಟ ವ್ಯಕ್ತಿಗಳಿಗೆ ತನ್ನ ಆಸ್ತಿಯಲ್ಲಿ ಪಾಲು ಸಿಗಬಾರದು ಎಂದು ಮೃತವ್ಯಕ್ತಿಯು ಬದುಕಿದ್ದಾಗ ಅಂದುಕೊಂಡಿದ್ದರೂ ಕಾನೂನು ಅವರೂ ಸೇರಿದಂತೆ ಯಾರಿಗೆ ಎಷ್ಟು ದೊರೆಯಬೇಕೋ ಅಷ್ಟನ್ನು ನೀಡಿ ಕೈತೊಳೆದುಕೊಳ್ಳುತ್ತದೆ.

ಹಿಂದು ಕಾನೂನು

ಹಿಂದುಗಳು,ಬೌದ್ಧರು,ಸಿಕ್ಖರು ಮತ್ತು ಜೈನರಿಗೆ ಹಿಂದು ವಾರಸಾ ಕಾಯ್ದೆ,1956 ಮತ್ತು ಹಿಂದು ವಾರಸಾ(ತಿದ್ದುಪಡಿ)ಕಾಯ್ದೆ,2005 ಅನ್ವಯವಾಗುತ್ತವೆ. ಹಿಂದು ಪುರುಷನೋರ್ವ ಉಯಿಲು ಬರೆದಿಡದೆ ಸತ್ತರೆ ಆತನ ಆಸ್ತಿಯು ಒಂದನೇ ವರ್ಗದ ಉತ್ತರಾಧಿಕಾರಿಗಳಿಗೆ ಸೇರುತ್ತದೆ. ಇಂತಹ ಉತ್ತರಾಧಿಗಳಿಲ್ಲದಿದ್ದರೆ ಎರಡನೇ ವರ್ಗದ ಉತ್ತರಾಧಿಕಾರಿಗಳಿಗೆ ಹೋಗುತ್ತದೆ. ಎರಡನೇ ವರ್ಗದ ಉತ್ತರಾಧಿಕಾರಿಗಳೂ ಇಲ್ಲದಿದ್ದರೆ ಆಸ್ತಿಯು ಆಗ್ನೇಟ್ಸ್ ಮತ್ತು ಕಾಗ್ನೇಟ್(ಮೃತ ವ್ಯಕ್ತಿಯ ಪುರುಷ ಅಥವಾ ಮಹಿಳಾ ಪೀಳಿಗೆಯ ಆಪ್ತ ಸಂಬಂಧಿಗಳು)ಗಳಿಗೆ ಸೇರುತ್ತದೆ. ಆಪ್ತ ಸಂಬಂಧಿಗಳೂ ಇಲ್ಲದಿದ್ದರೆ ಆಸ್ತಿಯು ಸರಕಾರಕ್ಕೆ ಸೇರುತ್ತದೆ.

ಒಂದನೇ ವರ್ಗದ ಉತ್ತರಾಧಿಕಾರಿಗಳು

ಮಗ/ಮಗಳು,ವಿಧವೆ ಪತ್ನಿ,ತಾಯಿ,ದಿವಂಗತ ಪುತ್ರನ ಮಗ/ಮಗಳು,ದಿವಂಗತ ಪುತ್ರಿಯ ಮಗ/ಮಗಳು,ದಿವಂಗತ ಪುತ್ರನ ವಿಧವೆ,ದಿವಂಗತ ಪುತ್ರನ ದಿವಂಗತ ಪುತ್ರನ ವಿಧವೆ,ಮಗ ಮತ್ತು ಮಗಳು

ಎರಡನೇ ವರ್ಗದ ಉತ್ತರಾಧಿಕಾರಿಗಳು

ತಂದೆ,ಮಗ/ಮಗಳ ಪುತ್ರ,ಮಗ/ಮಗಳ ಪುತ್ರಿ,ಸೋದರ,ಸೋದರಿ ಮುಂತಾದವರು ಈ ವರ್ಗದಲ್ಲಿ ಬರುತ್ತಾರೆ.

ಆಗ್ನೇಟ್ಸ್

ಪುರುಷ ಪೀಳಿಗೆಯ ದೂರದ ರಕ್ತ ಸಂಬಂಧಿಗಳು

ಕಾಗ್ನೇಟ್ಸ್ ಮಹಿಳಾ ಪೀಳಿಗೆಯ ದೂರದ ರಕ್ತ ಸಂಬಂಧಿಗಳು

ಹಿಂದು ಮಹಿಳೆಯೋರ್ವಳು ಮೃತಪಟ್ಟಾಗ ಆಸ್ತಿಯು ಈ ಕೆಳಗಿನವರಿಗೆ ಹೋಗುತ್ತದೆ

ಮೊದಲನೆಯದಾಗಿ,ಪುತ್ರರು ಮತ್ತು ಪುತ್ರಿಯರು(ದಿವಂಗತ ಪುತ್ರ ಅಥವಾ ಪುತ್ರಿಯ ಮಕ್ಕಳು ಸೇರಿದಮತೆ) ಮತ್ತು ಪತಿ

ಎರಡನೆಯದಾಗಿ,ಗಂಡನ ಉತ್ತರಾಧಿಕಾರಿಗಳು

ಮೂರನೆಯದಾಗಿ,ತಾಯಿ ಮತ್ತು ತಂದೆ

ನಾಲ್ಕನೆಯದಾಗಿ,ತಂದೆಯ ಉತ್ತರಾಧಿಕಾರಿಗಳು

ಐದನೆಯದಾಗಿ,ತಾಯಿಯ ಉತ್ತರಾಧಿಕಾರಿಗಳು

ಇಸ್ಲಾಮಿಕ್ ಕಾನೂನು

ಮುಸ್ಲಿಂ ಕಾನೂನು ಶೇರರ್ ಮತ್ತು ರೆಸಿಡ್ಯೂಯರಿ,ಹೀಗೆ ಎರಡು ವಿಧಗಳ ಉತ್ತರಾಧಿಕಾರಿಗಳಿಗೆ ಮಾನ್ಯತೆ ನೀಡುತ್ತದೆ. ಶೇರರ್‌ಗಳು ಮೃತನ ಆಸ್ತಿಯಲ್ಲಿ ನಿರ್ದಿಷ್ಟ ಪಾಲಿನ ಹಕ್ಕು ಹೊಂದಿರುತ್ತಾರೆ. ಶೇರರ್‌ಗಳು ತಮ್ಮ ಪಾಲು ಪಡೆದುಕೊಂಡ ನಂತರ ಉಳಿಯುವ ಆಸ್ತಿಯು ರೆಸಿಡ್ಯೂಯರಿಗಳಿಗೆ ಸೇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News