ಐಪಿಎಲ್: ಕಿಂಗ್ಸ್ ಇಲೆವೆನ್ ಪಂಜಾಬ್ 143/8

Update: 2018-04-23 16:30 GMT

ಹೊಸದಿಲ್ಲಿ, ಎ.23: ಐಪಿಎಲ್ ಟ್ವೆಂಟಿ-20 ಟೂರ್ನಿಯ 22ನೇ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 143 ರನ್ ಗಳಿಸಿದೆ.

ಇಲ್ಲಿನ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ದಾಂಡಿಗರು ದೊಡ್ಡ ಮೊತ್ತದ ಸವಾಲನ್ನು ಸೇರಿಸುವಲ್ಲಿ ವಿಫಲರಾದರು.

ಕರುಣ್ ನಾಯರ್(34) ಗಳಿಸಿರುವುದು ತಂಡದ ಪರ ಗರಿಷ್ಠ ಸ್ಕೋರ್ ಆಗಿದೆ.

ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ (23) ಡೇವಿಡ್ ಮಿಲ್ಲರ್ (26),ಮಾಯಾಂಕ್ ಅಗರ್‌ವಾಲ್(21) ಎರಡಂಕೆಯ ಸ್ಕೋರ್ ದಾಖಲಿಸಿದರು.

 ಡೆಲ್ಲಿ ತಂಡದ ಲಿಯಾಮ್ ಪ್ಲೆಂಕೆಟ್ (17ಕ್ಕೆ 3), ಟ್ರೆಂಟ್ ಬೌಲ್ಟ್(21ಕ್ಕೆ 2), ಅವೇಶ್ ಖಾನ್(36ಕ್ಕೆ 2) ಮತ್ತು ಡೇನಿಯಲ್ ಕ್ರಿಶ್ಚಿಯನ್(17ಕ್ಕೆ1) ಅವರು ಪಂಜಾಬ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು.

ಸಂಕ್ಷಿಪ್ತ ಸ್ಕೋರ್ ವಿವರ

ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್‌ಗಳಲ್ಲಿ 143/8( ಕರುಣ್ ನಾಯರ್ 34, ಮಿಲ್ಲರ್ 26, ರಾಹುಲ್ 23; ಪ್ಲೆಂಕೆಟ್ 17ಕ್ಕೆ 3).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News