ಪಾಕಿಸ್ತಾನ, ಶ್ರೀಲಂಕಾ ವಿರುದ್ಧ 5 ಟೆಸ್ಟ್ ಆಡಲಿರುವ ದ.ಆಫ್ರಿಕ

Update: 2018-04-23 18:40 GMT

ಜೋಹಾನ್ಸ್‌ಬರ್ಗ್, ಎ.23: ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕ ತಂಡ 2018-19ರಲ್ಲಿ 5 ಟೆಸ್ಟ್‌ಗಳನ್ನು ಆಡಲಿದೆ.

 2013-14ರ ಬಳಿಕ ಪಾಕಿಸ್ತಾನ ಮೊದಲ ಬಾರಿ ದಕ್ಷಿಣ ಆಫ್ರಿಕ ಪ್ರವಾಸ ಕೈಗೊಳ್ಳಲಿದೆ. ಮೂರು ಟೆಸ್ಟ್‌ಗಳ ಸರಣಿಯನ್ನು ಪಾಕ್ ವಿರುದ್ಧ ದಕ್ಷಿಣ ಆಫ್ರಿಕ ಆಡಲಿದೆ. ಪಾಕ್-ಆಫ್ರಿಕ ಮೊದಲ ಟೆಸ್ಟ್ 2018, ಡಿ.26ರಿಂದ 30ರ ತನಕ ಸೆಂಚೂರಿಯನ್‌ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ 2019, ಕೇಪ್‌ಟೌನ್‌ನಲ್ಲಿ ಜ.3ರಿಂದ 7ರ ತನಕ, ಮೂರನೇ ಟೆಸ್ಟ್ ಜ.11ರಿಂದ 15ರ ತನಕ ನಿಗದಿಯಾಗಿದೆ.

ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಡರ್ಬನ್‌ನಲ್ಲಿ ಫೆ.13ರಿಂದ 17, ಎರಡನೇ ಟೆಸ್ಟ್ ಫೆ.21ರಿಂದ 25ರ ತನಕ ಪೋರ್ಟ್ ಎಲಿಜಬೆತ್‌ನಲ್ಲಿ ನಡೆಯಲಿದೆ.

ಪಾಕಿಸ್ತಾನ , ಶ್ರೀಲಂಕಾ ಮತ್ತು ಝಿಂಬಾಬ್ವೆ ವಿರುದ್ಧ 13 ಏಕದಿನ ಮತ್ತು 9 ಟ್ವೆಂಟಿ-20 ಪಂದ್ಯಗಳನ್ನು ಆಫ್ರಿಕ ಆಯೋಜಿಸಿದೆ ಎಂದು ಕ್ರಿಕೆಟ್ ಸೌತ್ ಅಫ್ರಿಕ ಸೋಮವಾರ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News