ಪಾಕ್ ತಂಡದಲ್ಲಿ ಫೀಲ್ಡಿಂಗ್ ಮಾಡಿದ್ದರು ಸಚಿನ್ ತೆಂಡುಲ್ಕರ್

Update: 2018-04-24 07:23 GMT

ಮುಂಬೈ, ಎ.24: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 1989ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೆ ಇದಕ್ಕೂ ಮೊದಲು ಅವರು ಪಾಕ್ ತಂಡದಲ್ಲಿ ಫೀಲ್ಡಿಂಗ್ ನಡೆಸಿದ್ದರು ಎನ್ನುವುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ.

ಸಚಿನ್ ತೆಂಡುಲ್ಕರ್ ಇತ್ತೀಚೆಗೆ ಬಿಡುಗಡೆಗೊಳಿಸಿದ ಆತ್ಮಚರಿತ್ರೆ ‘ಪ್ಲೇಯಿಂಗ್ ಇಟ್ ಮೈ ವೇ’ ಪುಸ್ತಕದಲ್ಲಿ ಈ ವಿಚಾರವನ್ನು ಬರೆದಿದ್ದಾರೆ.

ಟೆಸ್ಟ್ ಕ್ರಿಕೆಟ್ ಪ್ರವೇಶಿಸುವ ಎರಡು ವರ್ಷಗಳ ಮೊದಲು ಅಂದರೆ 1987ರಲ್ಲಿ 14ರ ಹರೆಯದ ಸಚಿನ್ ತೆಂಡುಲ್ಕರ್ ಉತ್ಸವದ ಪಂದ್ಯದಲ್ಲಿ ಪಾಕ್ ತಂಡದ ಪರವಾಗಿ ಫೀಲ್ಡಿಂಗ್ ನಡೆಸಿದ್ದರು.

ಪಾಕ್ ನಾಯಕ ಇಮ್ರಾನ್ ಖಾನ್ ಅವರು ಸಚಿನ್ ತೆಂಡುಲ್ಕರ್‌ಗೆ ಫೀಲ್ಡಿಂಗ್ ನಡೆಸಲು ಅವಕಾಶ ನೀಡಿದ್ದರು. ಪಾಕ್ ತಂಡದ ಆಟಗಾರರಾದ ಜಾವೇದ್ ಮಿಯಾಂದಾದ್ ಮತ್ತು ಅಬ್ದುಲ್ ಖಾದರ್ ಅವರು ಊಟಕ್ಕೆ ತೆರಳಿದಾಗ ಖಾಲಿಯಾದ ಜಾಗಕ್ಕೆ ಸಚಿನ್ ತೆಂಡುಲ್ಕರ್ ಸೇರಿದಂತೆ ಸ್ಥಳೀಯ ಇಬ್ಬರು ಯುವ ಕ್ರಿಕೆಟಿಗರಿಗೆ ಫೀಲ್ಡಿಂಗ್ ನಡೆಸಲು ಅವಕಾಶ ನೀಡಲಾಗಿತ್ತು.

ಸಚಿನ್ ತೆಂಡುಲ್ಕರ್ ಅವರಿಗೆ ಕಪಿಲ್ ದೇವ್ ನೀಡಿದ ಕ್ಯಾಚ್ ಪಡೆಯವ ಅವಕಾಶ ಒದಗಿ ಬಂದಿದ್ದರೂ, ಅವರಿಗೆ ಲಾಂಗ್ ಆನ್‌ನಿಂದ ಓಡಿ ಬಂದು ಕ್ಯಾಚ್ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ವೇಳೆ ಮಿಡ್‌ಆನ್‌ನಲ್ಲಿದ್ದರೆ ಕ್ಯಾಚ್ ದೊರೆಯುವ ಸಾಧ್ಯತೆ ಇತ್ತು ಎಂದು ಸಚಿನ್ ತೆಂಡುಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News