×
Ad

ಲೇಖಕಿಯರ ಸಂಘದ ವಿವಿಧ ದತ್ತಿ ಪ್ರಶಸ್ತಿ ಪ್ರಕಟ

Update: 2018-04-24 20:28 IST

ಬೆಂಗಳೂರು, ಎ.25: ಕರ್ನಾಟಕ ಲೇಖಕಿಯರ ಸಂಘದ 2017 ನೆ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಲೇಖಕಿ ಡಾ.ಎಚ್.ಎಸ್.ಅನುಪಮಾ ಅವರ ಚಿವುಟಿದಷ್ಟೂ ಚಿಗುರು ಪುಸ್ತಕಕ್ಕೆ ಸುಧಾಮೂರ್ತಿ ದತ್ತಿ ಪ್ರಶಸ್ತಿ ಹಾಗೂ ಕೆ.ಟಿ.ಬನಶಂಕರಮ್ಮ ಪ್ರಶಸ್ತಿ ಚಂದ್ರಕಲಾ ನಂದಾವರಗೆ ನೀಡಲಾಗುತ್ತಿದೆ.

ಶೋಭಾ ಸುಂದರೇಶ್ ಮತ್ತು ಎನ್.ಡಿ.ಸುಂದರೇಶ್ ದತ್ತಿ ಪ್ರಶಸ್ತಿಯನ್ನು ಕೆ.ತಾರಾ ಭಟ್(ಸಾಹಿತ್ಯ), ಸೌಭಾಗ್ಯ ಬಾಬು(ಕೃಷಿ)ಗೆ, ಭಾಗ್ಯ ನಂಜಪ್ಪ ದತ್ತಿ ಪ್ರಶಸ್ತಿಗೆ ಡಾ.ಕೆ.ಎಸ್.ಪವಿತ್ರ(ವಿಜ್ಞಾನ ಸಾಹಿತ್ಯ) ಹಾಗೂ ವಿಶಿಷ್ಟ ಲೇಖಕಿ ಸನ್ಮಾನಕ್ಕೆ ಜಿ.ವಿ.ರೇಣುಕಾ, ಗಾಯತ್ರಿಮೂರ್ತಿ, ರಾಜೇಶ್ವರಿ ಕೃಷ್ಣ, ಅರುಂಧತಿ ರಮೇಶ್, ಹಾ.ವೀ.ಮಂಜುಳಾ ಶಿವಾನಂದ ಆಯ್ಕೆಯಾಗಿದ್ದಾರೆ.

2017 ನೆ ಸಾಲಿನಲ್ಲಿ ಪ್ರಕಟವಾದ ಪುಸ್ತಕಗಳಿಗೆ ನೀಡುವ ದತ್ತಿನಿಧಿ ಬಹುಮಾನಕ್ಕೆ ರಂಗಮ್ಮ ಹೊದೇಕಲ್(ಜೀವ ಪ್ರೀತಿಯ ಹಾಡು)ಗೆ ಗೀತಾ ದೇಸಾಯಿ, ಭಾಗ್ಯರೇಖಾ ದೇಶಪಾಂಡೆ(ಮಂಡೋದರಿ)ಗೆ ಕಾಕೋಳು ಸರೋಜಮ್ಮ, ಡಾ.ಇಂದಿರಾ ಹೆಗಡೆ(ಸಪ್ತ ಕನ್ಯೆಯರ ಕನ್ಯೆ ಭೂಮಿಯಲ್ಲಿ ನಮ್ಮ ನಡೆ)ಗೆ ಕಮಲಾ ರಾಮಸ್ವಾಮಿ, ಪ್ರಭಾಮಣಿ ನಾಗರಾಜ್(ಸ್ವೀಟ್ 60)ಗೆ ನುಗ್ಗೇಹಳ್ಳಿ ಪಂಕಜ, ಡಾ.ಎಸ್.ಸುಧಾ(ಹುಲಿಗಳ ಪ್ರವಾಸ ಮತ್ತು ಇತರೆ ಕಥೆಗಳು)ಗೆ ಗುಣಸಾಗರಿ ನಾಗರಾಜು ದತ್ತಿ ಪ್ರಶಸ್ತಿ ನೀಡಲಾಗುತ್ತಿದೆ.

ವಸಂತಿ ಶೆಟ್ಟಿ ಬ್ರಹ್ಮಾವರ(ಚೆಂಗುಡಿ)ಗೆ ಇಂದಿರಾ ವಾಣಿ ರಾವ್, ಸಾವಿತ್ರಿ ಮನೋಹರ್(ಹಂಸಾಯನ)ಗೆ ನೀಳಾದೇವಿ, ಡಾ.ಶಾಲಿನಿ ರಘುನಾಥ್(ಕಾಲು ಹಾದಿ)ಗೆ ಡಾ.ಜಯಮ್ಮ ಕರಿಯಣ್ಣ ಹಾಗೂ ಸತ್ಯವತಿ ರಾಮನಾಥ(ಪಾಶುಪತಾಸ್ತ್ರ)ಗೆ ಬ.ನ.ಸುಂದರ್‌ರಾವ್ ದತ್ತಿ ಪ್ರಶಸ್ತಿ ನೀಡಲಾಗುತ್ತಿದೆ. ಎಲ್ಲ ಪ್ರಶಸ್ತಿಗಳನ್ನು ಎ.28 ರಂದು ಕಸಾಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News