ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: 39 ಕೋಟಿ ರೂ.ನಗದು ವಶ; ಸಂಜೀವ್ ಕುಮಾರ್

Update: 2018-04-24 16:12 GMT

ಬೆಂಗಳೂರು, ಎ. 24: ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ದಾಖಲೆ ರಹಿತ ನಗದು ಸಾಗಾಟದ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಸೇರಿ ವಿವಿಧ ತಂಡಗಳು 39.82 ಕೋಟಿ ರೂ.ನಗದು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಅಲ್ಲದೆ, 24 ಗಂಟೆಗಳಲ್ಲಿ 58.89 ಲಕ್ಷ ರೂ.ನಗದು, 4 ಲಕ್ಷ ರೂ.ಮೊತ್ತದ 2 ವಾಹನಗಳು, 2.76 ಲಕ್ಷ ರೂ.ಮೊತ್ತದ 46 ಸೀರೆಗಳು, 9,854 ರೂ.ಮೊತ್ತದ 1600 ಕರಪತ್ರ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.

ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು 35.66 ಕೋಟಿ ರೂ.ನಗದು, 1.76 ಕೋಟಿ ರೂ.ಮೌಲ್ಯದ 7 ಕೆಜಿ ಚಿನ್ನಾಭರಣ, 11.47 ಲಕ್ಷ ರೂ.ಮೊತ್ತದ ಬೆಳ್ಳಿ, 1.97 ಕೋಟಿ ರೂ.ಮೊತ್ತದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ನೀತಿ ಸಂಹಿತೆ ಉಲ್ಲಂಘನೆ ಸಂಬಂಧ 11 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ ಅಬಕಾರಿ ಇಲಾಖೆ 10 ಸಾವಿರ ಲೀ.ಗಳಷ್ಟು ಐಎಂಎಲ್ ಮದ್ಯವನ್ನು ಮತ್ತು 48.61 ಲಕ್ಷ ರೂ. ಮೊತ್ತದ ಇತರೆ ಮದ್ಯ ವಶಪಡಿಸಿಕೊಂಡಿದ್ದು, 78 ಪ್ರಕರಣಗಳನ್ನು ದಾಖಲಿಸಿದೆ. ಮದ್ಯದ ಪರವಾನಿಗೆ ಉಲ್ಲಂಘಿಸಿದ ಆರೋಪದ ಮೇಲೆ 50ಪ್ರಕರಣ ದಾಖಲಿಸಿದ್ದು, 17.44 ಕೋಟಿ ರೂ.ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News