ಅರ್ಹತಾ ಸುತ್ತಿನಲ್ಲಿ 3ನೇ ಸ್ಥಾನ ಪಡೆದ ಅಭಿಷೇಕ್

Update: 2018-04-24 18:59 GMT

 ಶಾಂಘೈ, ಎ.24: ಏಷ್ಯನ್ ಗೇಮ್ಸ್ ಚಾಂಪಿಯನ್ ಅಭಿಷೇಕ್ ವರ್ಮ ಮೊದಲ ಚರಣದ ಆರ್ಚರಿ ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಅಂತಿಮ-32ರ ಸುತ್ತಿಗೆ ನಡೆದ ಅರ್ಹತಾ ಪಂದ್ಯದಲ್ಲಿ ಅಭಿಷೇಕ್ (18 ಎಕ್ಸ್)ಮೂರನೇ ಸ್ಥಾನ ಪಡೆದರು. ಬೆಳಗ್ಗಿನ ಕೊರೆಯುವ ಚಳಿಯಲ್ಲಿ ಯಾವ ಆರ್ಚರಿಗೆ ಕೂಡ ನಿಲ್ಲಲು ಸಾಧ್ಯವಾಗಿರಲಿಲ್ಲ. ಕೊರಿಯಾದ ಕಿಮ್ ಜಾಂಘೊ(31 ಎಕ್ಸ್) ಹಾಗೂ ಹಾಲೆಂಡ್‌ನ ಮೈಕ್ ಸ್ಕೋಲ್‌ಸ್ಸೆರ್(28 ಎಕ್ಸ್)ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದರು. ಈ ಮೂವರು ಬಿಲ್ಗಾರರು 720ರಲ್ಲಿ 710 ಅಂಕ ಗಳಿಸಿದರು. ಆರ್ಚರಿಗಳು ಎಷ್ಟು ಎಕ್ಸ್ ಪಡೆದಿದ್ದಾರೆ ಎನ್ನುವುದರ ಆಧಾರದಲ್ಲಿ ಶ್ರೇಯಾಂಕ ನಿರ್ಧಾರವಾಗುತ್ತದೆ. ಅಂತಿಮ-32ರ ಸುತ್ತಿನಲ್ಲಿ ಮೆಕ್ಸಿಕೊದ ರೊಮಿಯೊ ಅಲೆಜಾಂಡ್ರೊರನ್ನು ಎದುರಿಸುವ ಮೂಲಕ ಅಭಿಷೇಕ್ ತನ್ನ ಅಭಿಯಾನ ಆರಂಭಿಸಿದರು. ಭಾರತದ ರಜತ್ ಚೌಹಾಣ್ ಸಹ ಆಟಗಾರ ಸಂಗಮ್‌ಪ್ರೀತ್ ಸಿಂಗ್ ಬಿಸ್ಲಾರನ್ನು ಹಿಂದಿಕ್ಕಿ 26ನೇ ಸ್ಥಾನ ಪಡೆದಿದ್ದಾರೆ. ಮಹಿಳೆಯರ ಕಾಂಪೌಂಡ್ ವಿಭಾಗದಲ್ಲಿ ಜ್ಯೋತಿ ಸುರೇಖಾ(30ನೇ ರ್ಯಾಂಕ್), ಮಸ್ಕಾನ್ ಕಿರಾರ್(33)ಮುಂದಿನ ಸುತ್ತಿಗೇರಿದ್ದಾರೆ. ಮಧುಮಿತ ಕುಮಾರಿ(42) ಹಾಗೂ ದಿವ್ಯಾ ದಯಾಳ್(44)ಕೂಟದಿಂದ ಹೊರ ನಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News