ಇರಾಕಿನ ಪ್ರಜೆ ಇಬ್ರಾಹೀಂಗೆ ಯಶಸ್ವಿ ಶಸ್ತ್ರ ಚಿಕಿತ್ಸೆ
Update: 2018-04-25 22:13 IST
ಬೆಂಗಳೂರು, ಎ. 25: ಬಂದೂಕಿನ ಗುಂಡು ತಗುಲಿ ಎಡ ಮತ್ತು ಬಲ ದವಡೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದ ಇರಾಕಿನ ಪ್ರಜೆ ಇಬ್ರಾಹೀಂ ಎಂಬವರಿಗೆ ನಗರದ ರಿಚ್ಮಂಡ್ ರಸ್ತೆಯ ಗ್ಲೆನ್ ಈಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಮರುಜೀವ ನೀಡಿದ್ದಾರೆ.
ಇಬ್ರಾಹಿಂ ಅವರು 2015ರಲ್ಲಿ ಬಂದೂಕಿನಿಂದ ಸಿಡಿದ ಗುಂಡಿನಿಂದ ಮುಖಕ್ಕೆ ಆದ ಗಂಭೀರ ಸ್ವರೂಪದ ಗಾಯದಿಂದ ಬಳಲುತ್ತಿದ್ದರು. ಬಂದೂಕಿನಿಂದ ಹಾರಿದ್ದ ಗುಂಡು ಎಡದವಡೆಯಿಂದ ಬಲದವಡೆ ಮೂಲಕ ಹೊರಬಂದಿತ್ತು. ಅವರಿಗೆ ಬಾಯಿಯಲ್ಲಿರುವ ಅರೆಯುವ ಅಂಗವನ್ನು ಸತತ 10 ಗಂಟೆಗಳ ಶಸ್ತ್ರಚಿಕಿತ್ಸೆಯ ಮರು ಜೋಡಣೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.