ನಾಲ್ಕನೇ ದಿನ ಭಾರತಕ್ಕೆ ನಿರಾಸೆ

Update: 2018-04-25 18:58 GMT

ಚಾಂಗ್ವಾನ್, ಎ.25: ಐಎಸ್‌ಎಸ್‌ಎಫ್ ವಿಶ್ವಕಪ್‌ನ ನಾಲ್ಕನೇ ದಿನವಾದ ಬುಧವಾರ ಭಾರತದ ಶೂಟರ್‌ಗಳು ಕಳಪೆ ಪ್ರದರ್ಶನ ನೀಡಿ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ.

ಬುಧವಾರ ಮೂರು ಫೈನಲ್ ಪಂದ್ಯಗಳು ನಡೆದಿದ್ದು, ಯಾವೊಬ್ಬ ಭಾರತದ ಶೂಟರ್‌ಗಳು ಪದಕ ಸುತ್ತಿಗೆ ತೇರ್ಗಡೆಯಾಗಲಿಲ್ಲ.

ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಹೀನಾ ಸಿಧು 574 ಅಂಕ ಗಳಿಸಿ 14ನೇ ಸ್ಥಾನ ಪಡೆದರು. ಮಹಿಮಾ ಅಗರ್ವಾಲ್ ಹಾಗೂ ಮನು ಭಾಕರ್ ತಲಾ 571 ಅಂಕ ಗಳಿಸಿ ಕ್ರಮವಾಗಿ 27ನೇ ಹಾಗೂ 30ನೇ ಸ್ಥಾನ ಪಡೆದಿದ್ದಾರೆ. ಬೆಲಾರಸ್‌ನ ವಿಕ್ಟೋರಿಯಾ ಚೈಕಾ ಚಿನ್ನದ ಪದಕ ಜಯಿಸಿದ್ದಾರೆ. ಪುರುಷರ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್‌ನಲ್ಲಿ ಭಾರತದ ನೀರಜ್ ಕುಮಾರ್ ಹಾಗೂ ಅನೀಶ್ ಭಾನ್ವಾಲಾ ಕ್ರಮವಾಗಿ 579 ಹಾಗೂ 578 ಅಂಕ ಗಳಿಸಿ 13ನೇ ಹಾಗೂ 16ನೇ ಸ್ಥಾನ ಪಡೆದರು.

ಮಾಜಿ ವಿಶ್ವ ಚಾಂಪಿಯನ್ ಕೊರಿಯಾದ ಜುನ್‌ಹಾಂಗ್ ಕಿಮ್ ಫೈನಲ್‌ನಲ್ಲಿ 50ರಲ್ಲಿ 38 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದರು. ಮಿಕ್ಸೆಡ್ ಟ್ರಾಪ್ ಟೀಮ್ ಇವೆಂಟ್‌ನಲ್ಲಿ ಮಾನವ್‌ಜಿತ್ ಸಿಂಗ್ ಸಂಧು ಹಾಗೂ ಶ್ರೇಯಸಿ ಸಿಂಗ್ 150ರಲ್ಲಿ 139 ಅಂಕ ಗಳಿಸುವ ಮೂಲಕ 10ನೇ ಸ್ಥಾನ ಪಡೆದಿದ್ದಾರೆ. ಅಗ್ರ-6 ತಂಡಗಳು ಫೈನಲ್‌ಗೆ ತಲುಪಲಿವೆ. ಕೀನ್ಯನ್ ಚೆನೈ ಹಾಗೂ ಸೀಮಾ ಥೋಮರ್ ಅವರನ್ನೊಳಗೊಂಡ ಮತ್ತೊಂದು ಮಿಕ್ಸೆಡ್ ಟೀಮ್ ತಂಡ 134 ಅಂಕ ಗಳಿಸಿ 39 ತಂಡಗಳ ಪೈಕಿ 21ನೇ ಸ್ಥಾನ ಪಡೆದಿದೆ. ಭಾರತ ಟೂರ್ನಿಯಲ್ಲಿ ಈ ತನಕ ಕೇವಲ 1 ಪದಕ ಜಯಿಸಿದೆ. ಶೂಟರ್ ಶಹ್ಝಾರ್ ರಿಝ್ವಿ ಮಂಗಳವಾರ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News