ಫೀಲ್ಡರ್ ಗಳೂ ನಾಚುವಂತೆ ಬೌಂಡರಿ ತಡೆದ 'ವಿಕೆಟ್ ಕೀಪರ್' ಧೋನಿ!

Update: 2018-04-26 15:40 GMT

ಬೆಂಗಳೂರು, ಎ.26: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಹಾಗೂ ಸೂಪರ್ ಹೀರೊ ವಿಕೆಟ್‌ಕೀಪರ್ ಎಂಎಸ್ ಧೋನಿ ಬುಧವಾರ ಆರ್‌ಸಿಬಿ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಆಕರ್ಷಕ ಫೀಲ್ಡಿಂಗ್‌ನ ಮೂಲಕ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ತಂಡದ ನಾಯಕ ಧೋನಿ ಮತ್ತೊಮ್ಮೆ ಅದ್ಭುತ ಫೀಲ್ಡಿಂಗ್‌ನ ಮೂಲಕ ಗಮನ ಸೆಳೆದಿದ್ದಾರೆ.

ಆರ್‌ಸಿಬಿ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಕ್ವಿಂಟನ್ ಡಿಕಾಕ್ ಬೌಂಡರಿಯತ್ತ ಚೆಂಡನ್ನು ಅಟ್ಟಿದರು. ಆಗ ವಿಕೆಟ್‌ಕೀಪರ್ ಧೋನಿ ಪ್ಯಾಡ್ ಹಾಗೂ ಗ್ಲೌಸ್‌ನೊಂದಿಗೆ ವೇಗವಾಗಿ ಓಡಿ ಚೆಂಡು ಬೌಂಡರಿ ಗೆರೆ ದಾಟುವುದನ್ನು ತಡೆದರು. ಎದುರಾಳಿ ಆರ್‌ಸಿಬಿಗೆ ಕೇವಲ 2 ರನ್ ಬಿಟ್ಟುಕೊಟ್ಟರು. ವಿಕೆಟ್‌ಕೀಪರ್ ಕ್ರಿಕೆಟ್‌ನಲ್ಲಿ ಈ ರೀತಿಯ ಫೀಲ್ಡಿಂಗ್ ಮಾಡುವುದು ತುಂಬಾ ಅಪರೂಪ.

36ರ ಹರೆಯದ ಧೋನಿ ಆಧುನಿಕ ಕ್ರಿಕೆಟ್‌ನ ಫಿಟ್ ಆಟಗಾರರಾಗಿ ವಿಶ್ವದಲ್ಲಿ ಸದಾ ಸ್ಮರಣೀಯರಾಗಿದ್ದಾರೆ. ಇತ್ತೀಚೆಗೆ ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡದಲ್ಲಿ ಧೋನಿಗೆ ಸ್ಥಾನ ನೀಡಿರುವುದಕ್ಕೆ ಪ್ರಶ್ನಿಸುತ್ತಿರುವವರಿಗೆ ಅವರ ಈ ಬದ್ಧತೆ ತಕ್ಕ ಉತ್ತರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News