×
Ad

ಬೆಂಗಳೂರು: ಮೇ 1ರಂದು ಅಸದುದ್ದೀನ್ ಉವೈಸಿ ಜೆಡಿಎಸ್ ಪರ ಪ್ರಚಾರ

Update: 2018-04-27 21:33 IST

ಬೆಂಗಳೂರು, ಎ.27: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಎಐಎಂಐಎಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಸಂಸದ ಅಸದುದ್ದೀನ್ ಉವೈಸಿ ಮೇ 1 ರಂದು ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ.

ಅಂದು ಬೆಳಗ್ಗೆ 11 ಗಂಟೆಗೆ ನಗರದ ಚಿಕ್ಕಪೇಟೆ, ಮಧ್ಯಾಹ್ನ 2 ಗಂಟೆಗೆ ಪುಲಿಕೇಶಿನಗರ, ಸಂಜೆ 4 ಗಂಟೆಗೆ ಸರ್ವಜ್ಞನಗರ ಹಾಗೂ ಸಂಜೆ 7 ಗಂಟೆಗೆ ಚಾಮರಾಜಪೇಟೆಯಲ್ಲಿ ಪ್ರಚಾರ ಮಾಡುವ ಜೊತೆಗೆ ಸಾರ್ವಜನಿಕರ ಸಭೆಗಳಲ್ಲಿ ಅಸದುದ್ದೀನ್ ಉವೈಸಿ ಪಾಲ್ಗೊಳ್ಳಲಿದ್ದಾರೆ. ಇವರ ಜೊತೆಗೆ ಜೆಡಿಎಸ್ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಬೆಂಗಳೂರು ಅಧ್ಯಕ್ಷ ಆರ್.ಪ್ರಕಾಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News