‘ದೇಶಭಕ್ತರ ರಾಷ್ಟ್ರೀಯತೆ ಮತ್ತು ಜನತೆ ಮುಂದಿರುವ ಸವಾಲುಗಳು’: ಎ.28 ರಂದು ವಿಚಾರ ಸಂಕಿರಣ

Update: 2018-04-27 17:47 GMT

ಬೆಂಗಳೂರು, ಎ. 27: ‘ದೇಶಭಕ್ತರ ರಾಷ್ಟ್ರೀಯತೆ ಮತ್ತು ಜನತೆ ಮುಂದಿರುವ ಸವಾಲುಗಳು’ ವಿಷಯದ ಕುರಿತು ನಾಳೆ (ಎ.28) ಸಂಜೆ 4ಗಂಟೆಗೆ ಇಲ್ಲಿನ ಸೆಂಟ್ರಲ್ ಕಾಲೇಜ್ ಆವರಣದಲ್ಲಿನ ಸೆನೆಟ್ ಸಭಾಂಗಣದಲ್ಲಿ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.

ಇದೇ ವೇಳೆ ‘ಸಂಚುಗಾರ ಸಂಘ ಪರಿವಾರ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಿದ್ದು, ದಲಿತ್ ವಾಯ್ಸ ಸಂಪಾದಕ ವಿ.ಟಿ.ರಾಜಶೇಖರ್, ಹೊಸದಿಲ್ಲಿ ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಮಾತನಾಡಲಿದ್ದಾರೆ.

‘ಮೇಕ್ ಇನ್ ಇಂಡಿಯಾದಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಕೇವಲ ಮರೀಚಿಕೆಯೇ? ಅಚ್ಛೆದಿನ್‌ನಲ್ಲಿ ಮಾಧ್ಯಮಗಳು, ಸಂವಿಧಾನದ ಅಸ್ತಿತ್ವ ಹಾಗೂ ಸಾಮಾಜಿಕ ನ್ಯಾಯ, ಡಿಜಿಟಲ್ ಇಂಡಿಯಾದಲ್ಲಿ ಗೌರವಯುತ ಬದುಕು’ ಕುರಿತು ಲೇಖಕಿ ಸೌಮ್ಯ, ಅಗ್ನಿ ಶ್ರೀಧರ್, ಇಂದೂಧರ ಹೊನ್ನಾಪುರ, ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮಿ ವಿಷಯ ಮಂಡನೆ ಮಾಡಲಿದ್ದಾರೆ.

‘ಸಂಚುಗಾರ ಸಂಘಪರಿವಾರ’ ಕೃತಿಯ ಲೇಖಕಿ ಕಲೈಸೆಲ್ವಿ, ಅಗಸ್ತ್ಯ, ರಾಜಗೋಪಾಲ್, ನಾಗೇಶ್ ಅರಳಕುಪ್ಪೆ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಾಮಾಜಿಕ ನ್ಯಾಯ ವೇದಿಕೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News