×
Ad

ಕಥುವಾ ಅತ್ಯಾಚಾರ, ಕೊಲೆ ಪ್ರಕರಣ ‘ಸಣ್ಣ ಘಟನೆ’ ಎಂದ ಕವೀಂದರ್ ಗುಪ್ತಾ

Update: 2018-04-30 19:38 IST

ಹೊಸದಿಲ್ಲಿ, ಎ.30: ಜಮ್ಮು ಕಾಶ್ಮೀರದ ನೂತನ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲ ಹೊತ್ತಿನಲ್ಲೇ, “ಕಥುವಾ ಅತ್ಯಾಚಾರ, ಕೊಲೆ ಪ್ರಕರಣ ಸಣ್ಣ ಘಟನೆ” ಎಂದು ಹೇಳಿಕೆ ನೀಡಿರುವ ಕವೀಂದರ್ ಗುಪ್ತಾ ವಿವಾದವನ್ನು ಸೃಷ್ಟಿಸಿದ್ದಾರೆ.

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕಥುವಾ ಪ್ರಕರಣದ ಬಗ್ಗೆ ಕವೀಂದರ್ ಗುಪ್ತಾ ನೀಡಿರುವ ಹೇಳಿಕೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. “ರಸಾನಾ ಘಟನೆಯು ಸಣ್ಣ ಘಟನೆಯಾಗಿದೆ… ಇದು ಇನ್ನೊಮ್ಮೆ ನಡೆಯಬಾರದೆಂದು ನಾವು ಯೋಚಿಸಬೇಕು ಮಗುವಿಗೂ ನ್ಯಾಯ ಸಿಗುತ್ತದೆ. ಸರಕಾರ ಎದುರಿಸುವ ಹಲವು ಸಮಸ್ಯೆಗಳಿವೆ. ರಸಾನ ಘಟನೆಗೆ ಅಷ್ಟು ಪ್ರಾಮುಖ್ಯತೆ ನೀಡಬೇಕಾಗಿಲ್ಲ” ಎಂದವರು ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪರ ರ್ಯಾಲಿ ನಡೆಸಿದ್ದ ಬಿಜೆಪಿಯ ಇಬ್ಬರು ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News