ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 'ಭಯೋತ್ಪಾದಕ ಫ್ಯಾಕ್ಟರಿ'ಗಳ ನಿಷೇಧ: ರಾಮಲಿಂಗಾರೆಡ್ಡಿ

Update: 2018-04-30 14:44 GMT

ಬೆಂಗಳೂರು, ಎ.30: ನಮ್ಮ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೋಮುಗಲಭೆಗೆ ಪ್ರೋತ್ಸಾಹ ನೀಡುವ ಸಂಘಪರಿವಾರ, ಎಸ್‌ಡಿಪಿಐ, ಪಿಎಫ್‌ಐ, ಸೇರಿದಂತೆ ಕೆಲ ಸಂಘಟನೆಗಳನ್ನು ನಿಷೇಧಿಸುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯವರು ಕಳೆದ ಹತ್ತು ತಿಂಗಳಿಂದ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. 5 ವರ್ಷಗಳಲ್ಲಿ 30 ಕೋಮುಗಲಭೆ ಸೃಷ್ಟಿಯಾಗಿದ್ದರೆ, 28 ಗಲಭೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ಎರಡು ಉಡುಪಿಯಲ್ಲಿ ನಡೆದಿವೆ.

ಕೋಮುಗಲಭೆ ಸೃಷ್ಟಿಸುವ ಬಿಜೆಪಿಯ ಎಲ್ಲಾ ಯತ್ನಗಳನ್ನೂ ವಿಫಲಗೊಳಿಸಿದ್ದೇವೆ. ಸ್ವತಃ ಅಮಿತ್‌ ಶಾ ಅವರೇ ರಾಜ್ಯಕ್ಕೆ ಬೆಂಕಿ ಇಡುವಂತೆ ಕರೆ ನೀಡಿದ್ದರು. ಇದನ್ನು ವಿಫಲಗೊಳಿಸಿ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಿದ್ದೇವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಕೊಲೆ ಮಾಡುವುದು ಸುಲಭ ಎಂದು ಸ್ಥಾನಕ್ಕೆ ಚ್ಯುತಿ ತರುವಂತಹ ಹೇಳಿಕೆ ನೀಡಿದ್ದಾರೆ. ಮೊದಲು ಅಪರಾಧ ಪ್ರಕರಣಗಳ ಅಂಕಿ ಅಂಶಗಳನ್ನು ಗಮನಿಸಲಿ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News