×
Ad

39 ಕಡೆ ಹೆಲಿಕಾಪ್ಟರ್ ಬಳಕೆಗೆ ಬಿಜೆಪಿಗೆ ಅನುಮತಿ

Update: 2018-04-30 21:48 IST

ಬೆಂಗಳೂರು, ಎ. 30: ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ಮತ್ತು ಓಡಾಟಕ್ಕಾಗಿ ಹೆಲಿಕಾಪ್ಟರ್ ಮತ್ತು ಹೆಲಿಪ್ಯಾಡ್‌ಗಳ ಬಳಕೆಗೆ ಆನ್‌ಲೈನ್ ಮೂಲಕ ವಿವಿಧ ರಾಜಕೀಯ ಪಕ್ಷಗಳು ಒಟ್ಟು 64 ಕಡೆಗಳಲ್ಲಿ ಅನುಮತಿಗಾಗಿ ಅರ್ಜಿಸಲ್ಲಿಸಿವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವೆಬ್‌ಸೈಟ್‌ನಲ್ಲಿರುವ ಸುವಿಧಾದ ಮೂಲಕ ವಿವಿಧ ರಾಜಕೀಯ ಪಕ್ಷಗಳು ಆನ್‌ಲೈನ್ ಮೂಲಕ ಹೆಲಿಕ್ಯಾಪ್ಟರ್ ಮತ್ತು ಹೆಲಿಪ್ಯಾಡ್ ಬಳಕೆಗಾಗಿ ಸಲ್ಲಿಸಿದ್ದ 64 ಅರ್ಜಿಗಳ ಪೈಕಿ 58ಕ್ಕೆ ಅನುಮತಿ ನೀಡಲಾಗಿದ್ದು, ಮೂರು ಕೋರಿಕೆಯನ್ನು ತಿರಸ್ಕರಿಸಲಾಗಿದೆ. ಉಳಿದ 3 ಪರಿಶೀಲನೆ ಹಂತದಲ್ಲಿವೆ ಎಂದು ತಿಳಿಸಲಾಗಿದೆ.

ಈ ಪೈಕಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಒಟ್ಟು 39 ಕಡೆಗಳಲ್ಲಿ ಅನುಮತಿ ಪಡೆದುಕೊಂಡಿದೆ. ಎರಡು ಕಡೆಗಳಲ್ಲಿ ಅವರ ಕೋರಿಕೆಯನ್ನು ತಿರಸ್ಕರಿಸಲಾಗಿದೆ. ಕಾಂಗ್ರೆಸ್-6 ಕಡೆಗಳಲ್ಲಿ ಮತ್ತು ಜೆಡಿಎಸ್-13 ಕಡೆಗಳಲ್ಲಿ ಹೆಲಿಕಾಪ್ಟರ್ ಮತ್ತು ಹೆಲಿಪ್ಯಾಡ್ ಬಳಕೆಗಾಗಿ ಅನುಮತಿ ಪಡೆದುಕೊಂಡಿವೆ. ಪಕ್ಷೇತರರ ಅಭ್ಯರ್ಥಿಯೊಬ್ಬರ ಕೋರಿಕೆಯನ್ನು ತಿರಸ್ಕರಿಸಲಾಗಿದೆ ಎಂದು ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News