×
Ad

ಸಿಫೋರ್ 2ನೆ ಸಮೀಕ್ಷೆ ಪ್ರಕಾರ 128 ಸ್ಥಾನಗಳನ್ನು ಗೆಲ್ಲಲಿದೆ ಈ ಪಕ್ಷ

Update: 2018-04-30 22:10 IST

ಬೆಂಗಳೂರು, ಎ.30: ರಾಜ್ಯ ವಿಧಾನಸಭಾ ಚುನಾವಣೆ ಇನ್ನೇನು ಕೆಲ ದಿನಗಳಲ್ಲಿ ನಡೆಯಲಿದ್ದು, ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ನಾಳೆ ಪ್ರಧಾನಿ ಮೋದಿ ಕರ್ನಾಟಕಕ್ಕೆ ಆಗಮಿಸಲಿದ್ದು, 8 ದಿನಗಳ ಕಾಲ ಪ್ರಚಾರ ನಡೆಸಲಿದ್ದಾರೆ. ಈ ನಡುವೆ ಸಿಫೋರ್ ಸಮೀಕ್ಷೆ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ 118ರಿಂದ 128 ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. 

ಸಿಫೋರ್ ಮಾರ್ಚ್ ನಲ್ಲಿ ಬಿಡುಗಡೆಗೊಳಿಸಿದ್ದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ 126 ಸ್ಥಾನಗಳು ಲಭಿಸಬಹುದು ಎಂದು ಅಂದಾಜಿಸಲಾಗಿತ್ತು. ಈ ಬಾರಿ ಎರಡು ಸ್ಥಾನಗಳು ಹೆಚ್ಚಿವೆ. ಬಿಜೆಪಿ 63ರಿಂದ 73 ಹಾಗು ಜೆಡಿಎಸ್ 29ರಿಂದ 36 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ.

ಕಾಂಗ್ರೆಸ್ ಗೆ 45 ಶೇ., ಬಿಜೆಪಿಗೆ 32 ಶೇ. ಹಾಗು ಜೆಡಿಎಸ್ ಗೆ 18 ಶೇ. ಮತಹಂಚಿಕೆಯಾಗಲಿವೆ. ಈ ಬಾರಿ ಬಿಜೆಪಿಯ ಮತ ಪ್ರಮಾಣದಲ್ಲಿ 12 ಶೇ. ಅಧಿಕವಾಗಲಿದೆ. ಕಾಂಗ್ರೆಸ್ ಮತ ಪ್ರಮಾಣವೂ ಹೆಚ್ಚಲಿದೆ ಎಂದು ಸಮೀಕ್ಷೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News