×
Ad

ಚುನಾವಣೆ ನೀತಿ ಸಂಹಿತೆ ಬಳಿಕ ಪರಿಶೀಲನೆ: ಕೆ.ರತ್ನಪ್ರಭಾ

Update: 2018-04-30 22:18 IST

ಬೆಂಗಳೂರು, ಎ. 30: ರಾಜ್ಯ ಸರಕಾರಿ ನೌಕರರ ವೇತನ, ಭತ್ತೆ ಮತ್ತು ಪಿಂಚಣಿ ಪರಿಷ್ಕರಣೆಗೆ ಸಂಬಂಧಿಸಿದ ಆರನೆ ವೇತನ ಆಯೋಗ ತನ್ನ ಎರಡನೆ ವರದಿಯನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಸೋಮವಾರ ಸಲ್ಲಿಸಿದೆ.

ಎಂ.ಆರ್.ಶ್ರೀನಿವಾಸ ಮೂರ್ತಿ ಅವರ ನೇತೃತ್ವದ ಆರನೆ ವೇತನ ಆಯೋಗವು 500 ಪುಟಗಳ ಎರಡನೆ ಸಂಪುಟವನ್ನು(ಅಂತಿಮ ವರದಿ) ಸಲ್ಲಿಸಿತು. 2017-18ರ ಆಯವ್ಯಯದಲ್ಲಿ ಘೋಷಿಸಿದಂತೆ ಎಂ.ಆರ್.ಶ್ರಿನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ತ್ರಿಸದಸ್ಯರ ಆರನೆ ರಾಜ್ಯ ವೇತನ ಆಯೋಗವನ್ನು ರಾಜ್ಯ ಸರಕಾರ 2017ರ ಜೂನ್ 1ರಂದು ರಚಿಸಿತ್ತು.

ಆರನೆ ವೇತನ ಆಯೋಗವು ತನ್ನ ವರದಿ ಮೊದಲ ಸಂಪುಟದ ಶಿಫಾರಸುಗಳನ್ನು 2018ರ ಜ.31ರಂದು ಸಲ್ಲಿಸಿತ್ತು. ಮೊದಲನೆ ಶಿಫಾರಸುಗಳನ್ನು ಸರಕಾರ ಒಪ್ಪಿ, ಅನುಷ್ಠಾನಗೊಳಿಸಿದೆ. ಅದರನ್ವಯ ಸರಕಾರಿ ನೌಕರರ ವೇತನ, ಭತ್ತೆ ಮತ್ತು ಪಿಂಚಣಿಯನ್ನು 2017ರ ಜುಲೈ 1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.

ನೀತಿ ಸಂಹಿತೆ ಬಳಿಕ ಪರಿಶೀಲನೆ:
‘ಆರನೆ ರಾಜ್ಯ ವೇತನ ಆಯೋಗ ಸಲ್ಲಿಸಿರುವ ವರದಿಯ ಎರಡನೆ ಸಂಪುಟದ ಶಿಫಾರಸುಗಳನ್ನು ರಾಜ್ಯ ವಿಧಾನಸಭೆ ಚುನಾವಣಾ ನೀತಿ ಸಂಹಿತೆಯ ಅವಧಿ ಮುಕ್ತಾಯವಾದ ನಂತರ ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’
-ಕೆ.ರತ್ನಪ್ರಭಾ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News