ಹೆತ್ತಮಕ್ಕಳನ್ನೇ ಕೆರೆಗೆ ಎಸೆದು ಆತ್ಮಹತ್ಯೆ ಮಾಡಿಕೊಂಡ ತಾಯಿ ?
ಬೆಂಗಳೂರು, ಮೇ 1: ತಾನೇ ಹೆತ್ತ ಪುಟ್ಟ ಕಂದಮ್ಮಗಳನ್ನು ಕೆರೆಗೆ ಎಸೆದು ನಂತರ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಹೃದಯ ವಿದ್ರಾವಕ ಘಟನೆ ಮಾಗಡಿಯ ಕಲ್ಕೆರೆಯಲ್ಲಿ ನಡೆದಿದೆ.
ಸುಜಾತಾ ಅಂಜನಾಮೂರ್ತಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ತಾವರೆಕೆರೆಯ ತನ್ನ ನಿವಾಸದಿಂದ ಮಕ್ಕಳಾದ ಎ. ನಕುಲಾ (4) ಹಾಗೂ ಎ. ವಿಶಾಲ್ (3) ಅವರೊಂದಿಗೆ ಹೊರಟ ಸುಜಾತಾ, ಸಂಬಂಧಿಕರ ಮನೆಗೆ ಭೇಟಿ ನೀಡಿ, ನಂತರ ಸ್ಥಳೀಯ ಊರ ಹಬ್ಬದಲ್ಲಿ ಶನಿವಾರ ಹಾಗೂ ರವಿವಾರ ಮುಂಜಾನೆ ಪಾಲ್ಗೊಂಡು, ಮಧ್ಯಾಹ್ನ ಊಟದ ಬಳಿಕ ಮಕ್ಕಳನ್ನು ಕಲ್ಕೆರೆ ಕೆರೆ ಬಳಿಗೆ ವಾಯು ವಿಹಾರಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದ್ದು, ಸಂಜೆಯಾದರೂ ಮೂವರು ವಾಪಸ್ಸಾಗದ ಕಾರಣ ಸಂಬಂಧಿಕರು ಹುಡುಕಾಟ ಆರಂಭಿಸಿದ್ದಾರೆ. ಕೆರೆ ಬಳಿಗೆ ಬಂದಾಗ, ಮೂವರ ಚಪ್ಪಲಿ ಕೆರೆ ಬದಿಯಲ್ಲಿ ಕಂಡುಬಂದು, ನೀರಿನಲ್ಲಿ ಮುಳುಗಿ ಮೃತಪಟ್ಟಿರಬೇಕು ಎಂದು ಪೊಲೀಸರು ವಿವರಿಸಿದ್ದಾರೆ.
ಆದರೆ ಈ ಕೃತ್ಯಕ್ಕೆ ಸುಜಾತಾಳ ಪತಿಯೇ ಕಾರಣ ಎಂದು ಆಕೆಯ ಪೋಷಕರು ಆಪಾದಿಸಿದ್ದಾರೆ. ಆದರೆ ಈ ಘೋರ ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ.