×
Ad

ಈ ಚುನಾವಣೆ ಮೋದಿ ವಿರುದ್ಧ ಹಾಗೂ ಕರ್ನಾಟಕದ ಉಳಿವಿನ ಹೋರಾಟ: ಎಚ್.ಎಸ್.ದೊರೆಸ್ವಾಮಿ

Update: 2018-05-01 19:37 IST

ಬೆಂಗಳೂರು, ಮೇ 1: ರಾಜ್ಯ ವಿಧಾನಸಭೆಗೆ ಇದೇ 12ರಂದು ನಡೆಯಲಿರುವ ಚುನಾವಣೆ ಮೋದಿ ವಿರುದ್ಧ ಹಾಗೂ ಕರ್ನಾಟಕದ ಉಳಿವಿನ ಹೋರಾಟವಾಗಿದೆ. ಹೀಗಾಗಿ ರಾಜ್ಯದ ಜನತೆ ಎಚ್ಚರಿಕೆಯಿಂದ ಮತ ಚಲಾಯಿಸಬೇಕೆಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದ್ದಾರೆ.

ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಕರ್ನಾಟಕವನ್ನು ವಶಪಡಿಸಿಕೊಳ್ಳುವ ಮೂಲಕ ಇಡೀ ದೇಶವನ್ನು ವಶಪಡಿಸಿಕೊಳ್ಳುವ ಬಿಜೆಪಿ ಹುಚ್ಚಾಟವನ್ನು ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಅತ್ಯಂತ ಕೀಳುಮಟ್ಟದ ಚುನಾವಣಾ ಪ್ರಚಾರ ನಡೆಯುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ, ಅಧಿಕಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಯಾವ ಪಕ್ಷವೂ ಜನರಲ್ಲಿ ಪ್ರಜಾಪ್ರಭುತ್ವದ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ. ಬದಲಿಗೆ ಹಣ-ಆಮಿಷವೊಡ್ಡುವ ಕೆಲಸದಲ್ಲಿ ತೊಡಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಜನ ಯಾರಿಗೆ ಓಟು ಹಾಕಬೇಕೆಂಬುದು ಸರಿಯಾಗಿ ಅರ್ಥವಾಗದ ಪರಿಸ್ಥಿತಿ ಬಂದಿದೆ. ರಾಜಕೀಯ ಶುದ್ದೀಕರಣದ ಕೆಲಸ ಆಗಬೇಕು ಎಂದ ಅವರು, ಪಕ್ಷಗಳಿಗೆ ಪ್ರತಿನಿಧಿಗಳಿದ್ದಾರೆ. ಆದರೆ, ಜನರ ಪ್ರತಿನಿಧಿಗಳು ಯಾರಿದ್ದಾರೆ? ಯಾರೂ ಇಲ್ಲಾ. ಹೀಗಾಗಿ ಜನತೆ ಯೋಚಿಸಿ ಅರ್ಹರನ್ನು ಆಯ್ಕೆ ಮಾಡಬೇಕೆಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News