ಐಪಿಎಲ್: ಡೆಲ್ಲಿ ಡೇರ್‌ಡೆವಿಲ್ಸ್‌ಗೆ ಜಯ

Update: 2018-05-02 19:15 GMT
ಅರ್ಕಿ ಶಾರ್ಟ್

ಹೊಸದಿಲ್ಲಿ, ಮೇ 2: ಐಪಿಎಲ್ ಟ್ವೆಂಟಿ-20 ಟೂರ್ನಿಯ 32ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಡೆಲ್ಲಿ ಡೇರ್‌ಡೆವಿಲ್ಸ್ ತಂಡ4 ರನ್‌ಗಳ ಜಯ ಗಳಿಸಿದೆ.

ಮಳೆಬಾಧಿತ ಪಂದ್ಯದಲ್ಲಿ ಗೆಲುವಿಗೆ 12 ಓವರ್‌ಗಳಲ್ಲಿ 151 ರನ್‌ಗಳ ಸವಾಲು ಪಡೆದ ರಾಜಸ್ಥಾನ ರಾಯಲ್ಸ್ ತಂಡ 5 ವಿಕೆಟ್ ನಷ್ಟದಲ್ಲಿ 146 ರನ್ ಗಳಿಸಿದೆ.

  ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ದಾಂಡಿಗಾರದ ವಿಕೆಟ್ ಕೀಪರ್ ಜೋ ಬಟ್ಲರ್ 67 ರನ್(26ಎ, 4ಬೌ, 7 ಸಿ) , ಆರಂಭಿಕ ದಾಂಡಿಗ ಅರ್ಕಿ ಶಾರ್ಟ್ 44  ರನ್ (25ಎ, 2ಬೌ, 4 ಸಿ)  ,  ರಾಹುಲ್ ತ್ರಿಪಾಠಿ 9 ರನ್ , , ಸಂಜು ಸ್ಯಾಮ್ಸನ್ 3, ಸ್ಟೋಕ್ಸ್ 1 ರನ್ ಗಳಿಸಿ ಔಟಾದರು. ಕೃಷ್ಣಪ್ಪ ಗೌತಮ್ ಔಟಾಗದೆ  18ರನ್ ಗಳಿಸಿದರು.

ಡೆಲ್ಲಿ 196/6:ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಡೇರ್‌ಡೆವಿಲ್ಸ್ ತಂಡ 17.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 196 ರನ್ ಗಳಿಸಿತ್ತು.

     ನಾಯಕ ಶ್ರೇಯಸ್ ಅಯ್ಯರ್, ವಿಕೆಟ್ ಕೀಪರ್ ರಿಷಭ್ ಪಂತ್ ಅರ್ಧಶತಕಗಳ ಕೊಡುಗೆ ಮತ್ತು ಆರಂಭಕಾರ ಪೃಥ್ವಿ ಶಾ ಅವರ ಉಪಯುಕ್ತ 47 ರನ್‌ಗಳ ನೆರವು ನೀಡಿದರು. ಮಳೆಯಿಂದಾಗಿ ತಂಡವಾಗಿ ಆರಂಭಗೊಂಡ ಆಟ 18 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ 18ನೇ ಮೊದಲ ಎಸೆತದಲ್ಲಿ ಮಾಕ್ಸ್‌ವೆಲ್‌ರನ್ನು ಆರ್ಚೆರ್ ಎಲ್‌ಬಿಡಬ್ಲು ಬಲೆಗೆ ಕೆಡವಿದರು. ಇದರ ಬೆನ್ನಲ್ಲೇ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು.

  ನಾಯಕ ಶ್ರೇಯಸ್ ಅಯ್ಯರ್ 50 ರನ್(35ಎ, 3ಬೌ,3ಸಿ), ರಿಷಭ್ ಪಂತ್ 69 ರನ್(29ಎ, 7ಬೌ, 5ಸಿ) , ಆರಂಭಿಕ ದಾಂಡಿಗ ಪೃಥ್ವಿ ಶಾ 47 ರನ್ (25ಎ, 4ಬೌ 4ಸಿ) ಕೊಡುಗೆ ನೀಡಿದರು. ಮ್ಯಾಕ್ಸ್‌ವೆಲ್ 5ರನ್, ವಿ.ಶಂಕರ್ 17ರನ್ ಗಳಿಸಿ ಔಟಾದರು. ಪ್ಲೆಂಕೆಟ್ 1ರನ್ ಗಳಿಸಿ ಅಜೇಯರಾಗಿ ಉಳಿದರು.ಉನಾದ್ಕಟ್ 46ಕ್ಕೆ 3 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News