×
Ad

ಕೇಂದ್ರ ಚುನಾವಣಾ ಆಯೋಗ, ಕೇಂದ್ರ ಕಾನೂನು ಸಚಿವಾಲಯಕ್ಕೆ ಹೈಕೋರ್ಟ್ ನೋಟಿಸ್

Update: 2018-05-04 20:38 IST

ಬೆಂಗಳೂರು, ಮೇ 4: ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮತಕ್ಷೇತ್ರದಿಂದ ದೂರದ ಊರು ಅಥವಾ ವಿದೇಶಗಳಲ್ಲಿ ಇರುವ ಮತದಾರರಿಗೆ ಇ-ಮೇಲ್ ಮೂಲಕ ಮತ ಚಲಾಯಿಸಲು ಅನುಮತಿ ನೀಡುವ ಸಂಬಂಧ ಕೇಂದ್ರ ಚುನಾವಣಾ ಆಯೋಗ ಮತ್ತು ಕೇಂದ್ರ ಕಾನೂನು ಸಚಿವಾಲಯದ ಕಾರ್ಯದರ್ಶಿಗೆ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

ನಗರದ ಜಯನಗರ ನಿವಾಸಿ ಮಿಟ್ಟಿ ನರಸಿಂಹ ಮೂರ್ತಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ರಜಾ ಕಾಲದ ವಿಭಾಗೀಯ ಪೀಠ, ಈ ಆದೇಶ ಮಾಡಿ ವಿಚಾರಣೆ ಮುಂದೂಡಿತು.

ಪ್ರಸ್ತುತ ಸರಕಾರಿ ಉದ್ಯೋಗದಲ್ಲಿರುವವರು ಮಾತ್ರ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ಇದೆ. ಆದರೆ, ಉದ್ಯೋಗ, ವಿದ್ಯಾಭ್ಯಾಸ ಮತ್ತು ಚಿಕಿತ್ಸೆಗಾಗಿ ಬಹಳಷ್ಟು ಮತದಾರರು ತಮ್ಮ ಮತ ಕ್ಷೇತ್ರಗಳಿಂದ ಅನಿವಾರ್ಯವಾಗಿ ಹೊರಗೆ ಇರುವ ಸಂದರ್ಭಗಳಿರುತ್ತವೆ. ಚುನಾವಣೆ ವೇಳೆ ಅವರು ತಮ್ಮ ಮತ ಚಲಾಯಿಸಲು ಬಯಸಿದರೂ ಸಾಧ್ಯವಾಗುವುದಿಲ್ಲ. ಹೀಗಾಗಿ ಇ-ಮೇಲ್ ಮೂಲಕ ಮತ ಕ್ಷೇತ್ರಗಳಿಂದ ಹೊರಗಿರುವವರಿಗೆ ಮತ ಚಲಾವಣೆಗೆ ಅವಕಾಶ ಕಲ್ಪಿಸಬೇಕು, ಇದರಿಂದ ಮತ ಚಲಾವಣೆ ಪ್ರಮಾಣವೂ ಏರಿಕೆಯಾಗುತ್ತದೆ. ಆಯೋಗಕ್ಕೆ ಆರ್ಥಿಕ ಉಳಿತಾಯವಾಗುತ್ತದೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News