ಹೊಸ ಪಾಸ್ ವಿತರಿಸುವವರೆಗೂ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಲು ಅವಕಾಶ
Update: 2018-05-04 20:41 IST
ಬೆಂಗಳೂರು, ಮೇ 4: 2017-18ನೇ ಸಾಲಿನಲ್ಲಿ ಪ್ರಥಮ ಪಿಯುಸಿ ಅಭ್ಯಸಿಸಲು ಪಾಸ್ ಪಡೆದಿರುವ ವಿದ್ಯಾರ್ಥಿಗಳು 2018-19ರ ಸಾಲಿನ ಶೈಕ್ಷಣಿಕ ಪಾಸ್ ವಿತರಿಸುವವರೆಗೂ ಅದೇ ಪಾಸ್ ಬಳಸಿ ಕೆಎಸ್ಸಾಟಿಸಿ, ಬಿಎಂಟಿಸಿ ಸೇರಿ ಎಲ್ಲ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಪಿಯುಸಿ ವಿದ್ಯಾರ್ಥಿಗಳಿಗೆ ಮೇ 2ರಿಂದ ತರಗತಿ ಪ್ರಾರಂಭಿಸಿದೆ. ನಿಗಮ ಪ್ರತಿ ವರ್ಷದಂತೆ ಜೂನ್‌ನಿಂದ ನೂತನ ಶೈಕ್ಷಣಿಕ ವರ್ಷದ ಬಸ್ ಪಾಸ್ ವಿತರಿಸಲಿದ್ದು, ಅಲ್ಲಿಯವರೆಗೂ ಹಳೆಯ ಪಾಸಿನಲ್ಲಿ ನಮೂದಿಸಿರುವ ಮಾರ್ಗದಲ್ಲಿ(ವಾಸಸ್ಥಳ-ಕಾಲೇಜಿನ ನಡುವೆ) ಉಚಿತವಾಗಿ ಪ್ರಯಾಣಿಸಬಹುದು ಎಂದು ಕೆಎಸ್ಸಾರ್ಟಿಸಿ ಪ್ರಕಟಣೆ ತಿಳಿಸಿದೆ.