ಅಬ್ದುಲ್ ರಝಾಕ್

Update: 2018-05-04 17:06 GMT

ಮಂಗಳೂರು, ಮೇ 4: ತೊಕ್ಕೊಟ್ಟು ಸಮೀಪದ ಕುಂಪಲ ಬೈಪಾಸ್‌ನ ನೂರಾನಿ ಯತೀಂ ಖಾನಾ ಬಳಿಯ ನಿವಾಸಿ ಅಬ್ದುಲ್ ರಝಾಕ್ (68) ಶುಕ್ರವಾರ ಮುಂಜಾನೆ  ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಹಲವು ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದರು. ಕಿಡ್ನಿ ವೈಫಲ್ಯದಿಂದ ಕಳೆದ 9 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ