ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ರಿಯಾದ್ ಝೋನಲ್ ವಾರ್ಷಿಕ ಮಹಾಸಭೆ

Update: 2018-05-05 14:56 GMT

ರಿಯಾದ್, ಮೇ 5: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ಡಿ ಕೆ ಎಸ್ ಸಿ ) ರಿಯಾದ್ ಝೋನಲ್ ಇದರ 22ನೇ ವಾರ್ಷಿಕ ಮಹಾಸಭೆಯು ಝೋನಲ್ ಅಧ್ಯಕ್ಷ ದಾವೂದ್ ಕಜಮಾರ್ ಇವರ ಅಧ್ಯಕ್ಷತೆಯಲ್ಲಿ  ಮಲಝ್'ನ ಭಾರತ್ ರೆಸ್ಟೋರೆಂಟಿನಲ್ಲಿ ಜರಗಿತು. ಸದ್ರಿ ಸಭೆಯು ಜನಾಬ್ ಇಸ್ಮಾಯಿಲ್ ಕಾಟಿಪಳ್ಳರವರ ದುಆದೊಂದಿಗೆ ಶುಭಾರಂಭಗೊಂಡಿತು. ಬತ್ತಾ ಘಟಕದ ಅಧ್ಯಕ್ಷ ಮುಹಿಯುದ್ದೀನ್ ಝುಹ್ರಿ ಖಿರಾಆತ್ ಪಾರಾಯಣಗೈದರು.

ಕೇಂದ್ರ ಸಮಿತಿಯ ಉಪಾಧ್ಯಕ್ಷ  ಹಾತೀಂ ಕೂಳೂರು ಉದ್ಘಾಟಿಸಿದರು. ಝೋನಲ್ ಪ್ರಧಾನ ಕಾರ್ಯದರ್ಶಿ ನವಾಝ್ ಚಿಕ್ಕಮಗಳೂರು 2017-2018ರ ವಾರ್ಷಿಕ ವರದಿ ಓದಿದರು. ಝೋನಲ್ ಕೋಶಾಧಿಕಾರಿ  ಅಬ್ದುಲ್ ಅಝೀಝ್ ಬಜ್ಪೆ ಲೆಕ್ಕಪತ್ರ ಮಂಡಿಸಿದರು.

ಈ ಸಂದರ್ಭ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರು: ಅಬ್ದುಲ್ ಅಝೀಝ್ ಬಜ್ಪೆ, ಪ್ರ.ಕಾರ್ಯದರ್ಶಿ: ದಾವೂದ್ ಕಜೆಮಾರ್, ಕೋಶಾಧಿಕಾರಿ: ಇಸ್ಮಾಯಿಲ್ ಕನ್ನಂಗಾರ್, ಉಪಾಧ್ಯಕ್ಷರುಗಳಾಗಿ ಮನ್ಸೂರ್ ಕೃಷ್ನಾಪುರ, ಅಬ್ದುಲ್ ಖಾದರ್ ಕನ್ನಂಗಾರ್, ಯೂಸುಫ್ ಕಳಂಜಿಬೈಲ್, ಜೊತೆ ಕಾರ್ಯದರ್ಶಿಗಳು: ನವಾಝ್ ಚಿಕ್ಕಮಗಳೂರು, ಸಲೀಂ ಕನ್ಯಾಡಿ, ಹನೀಫ್ N.S, ಲೆಕ್ಕ ಪರಿಶೋಧಕ: ಅಬ್ದುಲ್ ಖಾದರ್ ಸಾದಾತ್ ಉಳ್ಳಾಲ, ಮೀಡಿಯಾ ಸೆಕ್ರೆಟರಿ: ಝಹೀರ್ ಅಬ್ಬಾಸ್ ಉಳ್ಳಾಲ, ಸಂಚಾಲಕರು: ಖಾಸಿಮ್ ತಲ್ಹತ್ ಉಜಿರೆ, ಹನೀಫ್ ಪಾವೂರು, ಅಬ್ದುಲ್ ರಹ್ಮಾನ್ ಉಚ್ಚಿಲ, ಇಲ್ಯಾಸ್ ಎರ್ಮಾಲ್, ರಶೀದ್ ಪೂಂಜಾಲಕಟ್ಟೆ, ಶರೀಫ್ ತೋಕೂರು, ಇಬ್ರಾಹಿಂ ಬಜ್ಪೆ, ಸಲಹೆಗಾರರು: ಯೂಸುಫ್ ಸಖಾಫಿ ಬೈತಾರ್, ಮುಹಿಯುದ್ದೀನ್ ಝುಹ್ರಿ ಪಡುಬಿದ್ರೆ, ಹಮೀದ್ ಸುಳ್ಯ, ಮುಹಮ್ಮದ್ ಸಿತಾರ್ ಹಾಜಿ, ಅಬೂಬಕರ್ ಪಡುಬಿದ್ರೆ, ನಝೀರ್ ಕಾಶೀಪಟ್ನ, ಅತಿಥಿಗಳಾಗಿ ಆಗಮಿಸಿದ ದಮ್ಮಾಮ್ ಝೋನಲ್ ಕಾರ್ಯದರ್ಶಿ ಅಝೀಝ್ ಮೂಡುತೋಟ ಹಾಗೂ ಕೇಂದ್ರ ಸಮಿತಿಯ ಉಪಾಧ್ಯಕ್ಷ ಮುಹಮ್ಮದ್ ಸಿತಾರ್ ನೂತನ ಸಮಿತಿಗೆ ಶುಭ ಹಾರೈಸಿ ಮಾತನಾಡಿದರು.

ಬುರೈದಾ ಘಟಕದ ಪ್ರತಿನಿಧಿಯಾಗಿ ಹಾಜರಿದ್ದ  ಅಬ್ದುಲ್ ಖಾದರ್ ಕನ್ನಂಗಾರ್, ಬತ್ತಾ ಘಟಕದ ಪರವಾಗಿ  ಅಬ್ದುಲ್ ರಹ್'ಮಾನ್ ಉಚ್ಚಿಲ, ಮಲಝ್ ಘಟಕದ ಪರವಾಗಿ ಇಸ್ಮಾಯೀಲ್ ಕನ್ನಂಗಾರ್ ಹಾಗೂ ಸಾದಾತ್ ಉಳ್ಳಾಲ, ಅಲ್-ಖರ್ಜ್ ಘಟಕದ ಪರವಾಗಿ  ಮಂಸೂರ್ ಕೃಷ್ಣಾಪುರ, ಶಿಫಾ ಘಟಕದ ಪರವಾಗಿ  ಯೂಸುಫ್ ಕಳಂಜಿಬೈಲ್, ಸನಯ್ಯಾ ಘಟಕದ ಪರವಾಗಿ  ಸಲೀಂ ಕನ್ಯಾಡಿ ಸಭೆಯನ್ನುದ್ದೇಶಿಸಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು. ಝೋನಲ್ ಕಾರ್ಯದರ್ಶಿ  ಹನೀಫ್ ಎನ್.ಎಸ್. ವಂದಿಸಿದರು.  ಉಸ್ತಾದ್ ಮುಸ್ತಫಾ ಸಅದಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News