ರೊಹಿಂಗ್ಯಾ ನಿರಾಶ್ರಿತರ ಪೌಷ್ಟಿಕತೆಗಾಗಿ ಯುಎಇ ದೇಣಿಗೆ

Update: 2018-05-05 17:17 GMT

ದುಬೈ, ಮೇ 5: ರೊಹಿಂಗ್ಯಾ ನಿರಾಶ್ರಿತ ಮಕ್ಕಳಿಗೆ ಉತ್ತಮ ಆಹಾರ ನೀಡುವ ನಿಟ್ಟಿನಲ್ಲಿ ಶ್ರಮಿಸಲು ಯುಎಇ ಮತ್ತು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್ (ಯುಎನ್‌ಎಚ್‌ಸಿಆರ್) ನಿರ್ಧರಿಸಿದ್ದಾರೆ.

ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿರುವ ರೊಹಿಂಗ್ಯಾ ನಿರಾಶ್ರಿತ ಮಕ್ಕಳ ಪೈಕಿ ಪ್ರತಿ ಐದರಲ್ಲಿ ಒಂದು ಮಗು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ. ಇದಕ್ಕಾಗಿ ನಿರಾಶ್ರಿತ ಶಿಬಿರಗಳಲ್ಲಿ ಯುಎನ್‌ಎಚ್‌ಸಿಆರ್ ನಡೆಸುತ್ತಿರುವ ಪೌಷ್ಟಿಕ ಆಹಾರ ಕಾರ್ಯಕ್ರಮದಲ್ಲಿ ಯುಎಇ ಕೈಜೋಡಿಸಲಿದೆ.

78,000 ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ, 1,32,700 ನಿರಾಶ್ರಿತರ ಅಗತ್ಯವನ್ನು ಪೂರೈಸುವ ಕಾರ್ಯಕ್ರಮಕ್ಕೆ ಯುಎಇ 7.35 ಮಿಲಿಯ ದಿರ್ಹಮ್ (13.37 ಕೋಟಿ ರೂಪಾಯಿ) ದೇಣಿಗೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News