ಉತ್ತರ ಪ್ರದೇಶದ ಮಾಜಿ ಸಿಎಂಗಳು ಸರಕಾರಿ ಬಂಗಲೆಗಳಲ್ಲಿ ವಾಸವಾಗುವಂತಿಲ್ಲ: ಸುಪ್ರೀಂ ಕೋರ್ಟ್

Update: 2018-05-07 11:20 GMT

ಹೊಸದಿಲ್ಲಿ,ಮೇ.7 : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳು ಸರಕಾರಿ ಬಂಗಲೆಗಳಲ್ಲಿ ವಾಸಿಸುವಂತಿಲ್ಲ, ಈ ಬಂಗಲೆಗಳು ಸಾರ್ವಜನಿಕ ಆಸ್ತಿಯಾಗಿದ್ದು ದೇಶದ ಜನರಿಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಉತ್ತರ ಪ್ರದೇಶದ ಹಿಂದಿನ ಅಖಿಲೇಶ್ ಯಾದವ್ ಸರಕಾರ ಕಾನೂನಿನಲ್ಲಿ ಬದಲಾವಣೆ ತಂದು ಮಾಜಿ ಮುಖ್ಯಮಂತ್ರಿಗಳು ತಮ್ಮ ಅಧಿಕೃತ ನಿವಾಸಗಳಲ್ಲಿ ಜೀವಮಾನಪೂರ್ತಿ ವಾಸಿಸಲು ಅನುಕೂಲ ಕಲ್ಪಿಸಿತ್ತು. 2016ರಲ್ಲಿ ಕೈಗೊಂಡ ಈ ಕ್ರಮದಿಂದಾಗಿ ಮಾಜಿ ಮುಖ್ಯಮಂತ್ರಿಗಳಾದ ರಾಜನಾಥ್ ಸಿಂಗ್, ಕಲ್ಯಾಣ್ ಸಿಂಗ್,  ಮುಲಾಯಂ ಸಿಂಗ್ ಯಾದವ್, ಮಾಯಾವತಿ ಹಾಗೂ ಎನ್‍ಡಿ ತಿವಾರಿ ಅವರಿಗೆ ಸರಕಾರಿ ಬಂಗಲೆಗಳು ದೊರಕಿದ್ದವು.

"ಆದರೆ ಒಮ್ಮೆ ಅಧಿಕಾರದಿಂದ ಕೆಳಗಿಳಿದ ನಂತರ ಮುಖ್ಯಮಂತ್ರಿಯೊಬ್ಬ ಸಾಮಾನ್ಯ ನಾಗರಿಕನಿಗೆ ಸಮ. ಆದರೆ ಮಾಜಿ ಮುಖ್ಯಮಂತ್ರಿ ಎಂಬ ನೆಲೆಯಲ್ಲಿ ಅವರಿಗೆ ಭದ್ರತೆ ಹಾಗೂ ಇತರ ಶಿಷ್ಟಾಚಾರ ಆನ್ವಯವಾಗುತ್ತವೆ,'' ಎಂದು ನ್ಯಾಯಾಲಯ ತಿಳಿಸಿದೆ.

1981ರಲ್ಲಿ ಆಗಿನ ವಿಪಿ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಎಲ್ಲಾ ಮುಖ್ಯಮಂತ್ರಿಗಳು ಹುದ್ದೆ ತೊರೆದ 15 ದಿನಗಳೊಳಗಾಗಿ ತಮ್ಮ ಬಂಗಲೆಗಳನ್ನು ಹಸ್ತಾಂತರಿಸಬೇಕೆಂದು ಹಾಗೂ ಅದಕ್ಕಿಂತ ಹೆಚ್ಚು ಸಮಯ ಅಲ್ಲಿದ್ದರೆ ಅದಕ್ಕೆ ಬಾಡಿಗೆ ತೆರಬೇಕೆಂದು ಹೇಳಿತ್ತು.

ಆದರೆ ಅಖಿಲೇಶ್ ಯಾದವ್ ಸರಕಾರ ನಿಯಮಗಳಿಗೆ ಬದಲಾವಣೆ ತಂದ ಕಾರಣದಿಂದಾಗಿ ಮಾಜಿ ಮುಖ್ಯಮಂತ್ರಿ ಮಾಯಾವತಿ ಲಕ್ನೋದಲ್ಲಿ ಐದು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ತಮ್ಮ 10 ಬೆಡ್ ರೂಂ ಮನೆಯನ್ನು ಉಳಿಸಿಕೊಳ್ಳಲು ಸಫಲರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News