ಕಾರ್ಖಾನೆ ನೌಕರರಿಗೆ ವೇತನ ಸಹಿತ ರಜೆ ಕಡ್ಡಾಯ
Update: 2018-05-08 22:09 IST
ಬೆಂಗಳೂರು, ಮೇ 8: ವಿಧಾನಸಭಾ ಚುನಾವಣೆ ನಡೆಯುವ ಮೇ 12ರಂದು ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅರ್ಹ ನೌಕರ ಮತದಾರರಿಗೆ ವೇತನ ಸಹಿತ ರಜೆ ಮಂಜೂರು ಮಾಡುವುದು ಕಾರ್ಖಾನೆಗಳ ಆಡಳಿತ ಮಂಡಳಿಯ ಕರ್ತವ್ಯವಾಗಿದೆ ಎಂದು ಕೈಗಾರಿಕಾ ಸಂರಕ್ಷತೆ ಮತ್ತು ಸ್ವಾಸ್ಥ ಇಲಾಖೆ ತಿಳಿಸಿದೆ.
ಸಂಬಂಧಪಟ್ಟ ಎಲ್ಲ ನೋಂದಾಯಿತ ಕಾರ್ಖಾನೆಗಳ ಆಡಳಿತ ವರ್ಗದವರು ತಮ್ಮ ನೌಕರರಿಗೆ ವೇತನ ಸಹಿತ ರಜೆ ಕೊಟ್ಟು ಮತದಾರರ ಮೂಲಭೂತ ಹಕ್ಕನ್ನು ಚಲಾಯಿಸಲು ಅನುವು ಮಾಡಿಕೊಡಬೇಕು. ಮತದಾನಕ್ಕೆ ಅವಕಾಶ ಕಾಡಿಕೊಡದ ಕಾರ್ಖಾನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಪ್ರಕಟನೆಯಲ್ಲಿ ಎಚ್ಚರಿಸಿದೆ.