ಕ್ರೈಸ್ತ ನಿಗಮ ಸ್ಥಾಪನೆ: ಜೆಡಿಎಸ್‌ನಿಂದ ಪ್ರಣಾಳಿಕೆ ಪೂರಕ ಅಂಶ ಬಿಡುಗಡೆ

Update: 2018-05-09 17:43 GMT

ಬೆಂಗಳೂರು, ಮೇ 9: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಬಿಡುಗಡೆ ಮಾಡಿದ್ದ ಪ್ರಣಾಳಿಕೆ ಜೊತೆಗೆ ಕ್ರೈಸ್ತ ನಿಗಮ ಸ್ಥಾಪನೆ, ಚರ್ಚ್‌ಗಳ ಜೀರ್ಣೋದ್ಧಾರ ಸೇರಿ ಕ್ರೈಸ್ತ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಕೆಲವು ಪೂರಕ ಅಂಶಗಳನ್ನು ಬಿಡುಗಡೆಗೊಳಿಸಿದೆ.

ಬುಧವಾರ ನಗರದ ಜೆಡಿಎಸ್ ಪ್ರಧಾನ ಕಚೇರಿ ಜೆಪಿಭವನದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಆದೇಶದಂತೆ ರಾಜ್ಯ ಕಾರ್ಯದರ್ಶಿ ಎಂ.ಎಸ್.ನಾರಾಯಣರಾವ್ ಪ್ರಣಾಳಿಕೆಗೆ ಪೂರಕವಾಗುವಂತೆ ಕೆಲವೊಂದು ಅಂಶಗಳ ಯೋಜನೆಗಳನ್ನು ಬಿಡುಗಡೆ ಮಾಡಿದರು.

ಅಂಶಗಳು ಹೀಗಿವೆ: ಕ್ರೈಸ್ತರ ಜೆರುಸಲೇಂ ಯಾತ್ರೆಗೆ ಸಹಾಯಧನ, ಕ್ರೈಸ್ತ ಸಮುದಾಯಭವನ ಹಾಗೂ ಚರ್ಚ್‌ಗಳ ಜೀರ್ಣೋದ್ಧಾರ, ಕ್ರೈಸ್ತರಧಾರ್ಮಿಕ ಕ್ಷೇತ್ರಗಳು, ಪ್ರಾರ್ಥನಾ ಮಂದಿರಗಳಿಗೆ ಹೆಚ್ಚಿನ ಸೌಲಭ್ಯ, ಧರ್ಮಗುರುಗಳಿಗೆ ಸೂಕ್ತ ರಕ್ಷಣೆ, ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಅವಕಾಶ, ತಾಂತ್ರಿಕ ತರಬೇತಿ ಕೇಂದ್ರಗಳ ಸ್ಥಾಪನೆ ಮಾಡುವುದಾಗಿ ತಿಳಿಸಿದೆ.

ಇನ್ನು, ವಿಕಲಚೇತನರ ಅಭಿವೃದ್ದಿಗಾಗಿ ಪ್ರತ್ಯೇಕ ಸಚಿವಾಲಯ, ವಿಕಲಚೇತನರ ಹಕ್ಕು ಕಾಯಿದೆಗಳನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸುವುದು , ವಿಕಲಚೇತನರ ಆರೈಕೆಯಲ್ಲಿ ತೊಡಗುವವರಿಗೆ ಸಹಾಯಧನ, ಸರಕಾರಿ ಭೂ ಒತ್ತುವರಿ ತಡೆಯಲು ಸೂಕ್ತ ಕ್ರಮ ಸೇರಿದಂತೆ ಇನ್ನಿತರ ಅಂಶಗಳನ್ನು ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News